‘ಎಳ್ಳು–ಬೆಲ್ಲ ತಿಂದು ಒಳ್ಳೆಯ ಮಾತಾಡಿ’
ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯ ಈ.ಸಿ ನಿಂಗರಾಜ್ ಗೌಡ ಮಾತನಾಡಿ ‘ಸಂಕ್ರಾಂತಿ ಎಂದರೆ ಶ್ರಮ ಸಂಸ್ಕೃತಿ ಸಹಭಾಗಿತ್ವದ ಸುಂದರ ಸಂಗಮವಾಗಿದ್ದು ಈ ಹಬ್ಬದಲ್ಲಿ ಎಳ್ಳು–ಬೆಲ್ಲದ ಸಿಹಿ ಕಬ್ಬಿನ ಮಧುರತೆ ಹೊಸ ಬೆಳೆಯ ಸಮೃದ್ಧಿ ಪ್ರತಿಯೊಬ್ಬರ ಜೀವನವನ್ನೂ ತುಂಬಬೇಕು’ ಎಂದು ತಿಳಿಸಿದರು. ಎಳ್ಳು–ಬೆಲ್ಲ ಹಂಚಿಕೊಳ್ಳುವುದು ಗಾಳಿಪಟ ಹಾರಿಸುವುದು ಕಿಚ್ಚು ಹಾಯಿಸುವುದು ಬಂಧು–ಮಿತ್ರರ ಮನೆಗಳಿಗೆ ತೆರಳಿ ಶುಭಾಶಯ ಹೇಳಿಕೊಳ್ಳುವುದು ಸಂಕ್ರಾಂತಿ ಸಂಭ್ರಮದ ಭಾಗವಾಗಿದೆ. ‘ಎಳ್ಳು ಬೆಲ್ಲ ತಿನ್ನಿ ಒಳ್ಳೆ ಮಾತಾಡಿ’ ಎಂದು ಜನರು ಹೇಳುತ್ತಾರೆ. ಸಿಹಿಯಾದ ಈ ಮಿಶ್ರಣದಂತೆಯೇ ಸಂಬಂಧಗಳೂ ಸಿಹಿಯಾಗಲಿ ದ್ವೇಷಗಳು ದೂರವಾಗಿ ಸ್ನೇಹ–ಸೌಹಾರ್ದ ಹೆಚ್ಚಾಗಲಿ ಎಂಬುದು ಇದರ ಒಳಾರ್ಥವಾಗಿದೆ ಎಂದು ಹೇಳಿದರು.