ಮಂಡ್ಯ: ‘87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ನಿಷೇಧಿಸಿರುವುದನ್ನು ವಿರೋಧಿಸಿ ‘ಮನೆಗೊಂದು ಕೋಳಿ ಮತ್ತು ಊರಿಗೊಂದು ಕುರಿ ಸಂಗ್ರಹ’ ಅಭಿಯಾನಕ್ಕೆ ಚಾಲನೆ ನೀಡಿ, ಸಮ್ಮೇಳನದಲ್ಲಿ ಮಾಂಸಪ್ರಿಯರಿಗೆ ಅಡುಗೆ ಮಾಡಿಸುತ್ತೇವೆ’ ಎಂದು ಸಾಹಿತಿ ರಾಜೇಂದ್ರ ಪ್ರಸಾದ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ಪ್ರಾತಿನಿಧ್ಯವಿರುಬೇಕೆಂಬುದು ನಮ್ಮ ಉದ್ದೇಶ. ತಂಬಾಕು, ಮದ್ಯಪಾನ ಹಾಗೂ ಮಾಂಸಾಹಾರ ನಿಷೇಧಿಸಲಾಗಿದೆ ಎಂಬ ನಿಬಂಧನೆಯನ್ನು ಖಂಡಿಸಿಯೇ ಇದು ಪ್ರಾರಂಭವಾಗಿದ್ದು ಎಂಬುದನ್ನು ಅರಿತುಕೊಳ್ಳಬೇಕು’ ಎಂದರು.

‘ಸಮ್ಮೇಳನದಲ್ಲಿ ಮಾಂಸಾಹಾರಕ್ಕೆ ನಿಷೇಧವಿಲ್ಲ. ಆದರೂ ಅದನ್ನು ಕೀಳಾಗಿ ಕಾಣುತ್ತಿರುವುದನ್ನು ಹೋಗಲಾಡಿಸುವ ಹಾಗೂ ಆಹಾರದಲ್ಲಿ ಸಮಾನತೆ ತರುವ ಪ್ರಯತ್ನ ನಮ್ಮದು. ಸಾರ್ವಜನಿಕರ ಹಣವನ್ನು ಸಮ್ಮೇಳನದಲ್ಲಿ ಬಳಸುತ್ತಿದ್ದು, ಒಂದು ಮೊಟ್ಟೆ ಹಾಗೂ ಒಂದು ತುಂಡು ಮಾಂಸ ನೀಡಲು ಸಮಸ್ಯೆ ಏನಿದೆ’ ಎಂದು ಪ್ರಶ್ನಿಸಿದರು.

ಕರುನಾಡು ಸೇವಕರ ಸಂಘಟನೆಯ ಎಂ.ಬಿ.ನಾಗಣ್ಣಗೌಡ, ‘ಸಮ್ಮೇಳನಕ್ಕೆ ಹಾಕಿರುವ ಬ್ರಾಹ್ಮಣ್ಯದ ಜನಿವಾರವನ್ನು ಬಾಡೂಟದ ಮೂಲಕ ತೆರವುಗೊಳಿಸುವ ಪ್ರಯತ್ನ ಮಾಡುತ್ತೇವೆ’ ಎಂದರು.

ಸಾಮಾಜಿಕ ಕಾರ್ಯಕರ್ತ ಸಂತೋಷ್ ಮಾತನಾಡಿದರು. ಲಕ್ಷ್ಮಣ್ ಚೀರನಹಳ್ಳಿ, ಸಿ. ಕುಮಾರಿ, ಶಿವಶಂಕರ್, ಧನುಷ್, ಮನು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.