ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೊಪ್ಪಿನ ಬೆಳೆ ನಾಶ ಮಾಡಿದ ರೈತ

Last Updated 1 ಮೇ 2021, 7:59 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಕೋವಿಡ್‌ ಮತ್ತು ಕರ್ಫ್ಯೂ ಕಾರಣದಿಂದ, ಸಾಂಬಾರು ಸೊಪ್ಪಿಗೆ ಬೇಡಿಕೆ ಇಲ್ಲದೆ ನಷ್ಟ ಅನುಭವಿಸಿದ ಗಂಜಾಂನ ರೈತರೊಬ್ಬರು ತಾವು ಬೆಳೆದಿದ್ದ ಸೊಪ್ಪಿನ ಬೆಳೆಯನ್ನು ನಾಶ ಮಾಡಿದ್ದಾರೆ.

ಗಂಜಾಂನ ರಮೇಶ ಅವರು ಒಂದು ಎಕರೆ ಜಮೀನಿನಲ್ಲಿ ಮೆಂತ್ಯ, ಕೀರೆ, ಕಿಲಕೀರೆ, ಸಬ್ಬಸಿಗೆ, ದಂಟು, ಕೊತ್ತಂಬರಿ ಹೀಗೆ ಬಗೆ ಬಗೆಯ ಸೊಪ್ಪು ಬೆಳೆದಿದ್ದರು. ಬೇಡಿಕೆ ಇಲ್ಲದೇ, ಶುಕ್ರವಾರ ಹುಲ್ಲು ಕತ್ತರಿಸುವ ಯಂತ್ರದಿಂದ ಕತ್ತರಿಸಿ ಹಾಕಿದ್ದಾರೆ.

‘₹ 30 ಸಾವಿರ ಖರ್ಚು ಮಾಡಿ ಸೊಪ್ಪು ಬೆಳೆದಿದ್ದೆ. ಆದರೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಾ ಬಂದಂತೆ ಸೊಪ್ಪಿಗೆ ಬೇಡಿಕೆ ಕುಸಿಯಿತು. ಒಂದು ವಾರದಿಂದ ಸೊಪ್ಪನ್ನು ಯಾರೂ ಕೇಳುತ್ತಿಲ್ಲ. ಹಾಗೇ ಬಿಟ್ಟರೆ ಭೂಮಿಯ ಫಲವತ್ತತೆ ಹಾಳಾಗುತ್ತದೆ. ಹಾಗಾಗಿ ಬಲಿಯುತ್ತಿರುವ ಸೊಪ್ಪನ್ನು ತೆಗೆದು ಬೇರೆ ಬೆಳೆಯಲು ಭೂಮಿ ಸಿದ್ಧಪಡಿಸುತ್ತಿದ್ದೇನೆ’ ಎಂದು ರಮೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT