ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಡ್ಯ: ಸ್ಕೋಪ್‌ ಫೌಂಡೇಷನ್‌ನಿಂದ ಮತ್ತೆ ₹ 3.5 ಕೋಟಿ ನೆರವು

Last Updated 30 ಜುಲೈ 2021, 12:20 IST
ಅಕ್ಷರ ಗಾತ್ರ

ಮಂಡ್ಯ: ಅಮೆರಿಕದ ಸ್ಕೋಪ್‌ (ಸೊಸೈಟಿ ಆಫ್‌ ಚಿಲ್ಡ್ರನ್‌ ಆಫ್‌ ಪ್ಲಾನೆಟ್‌ ಅರ್ಥ್‌) ಫೌಂಡೇಷನ್‌ ವತಿಯಿಂದ ಮಂಡ್ಯ ಹಾಗೂ ದೊಡ್ಡಬಳ್ಳಾಪುರ ಜಿಲ್ಲೆಗೆ ₹ 3.5 ಕೋಟಿ ಮೌಲ್ಯದ ವೈದ್ಯಕೀಯ ಉಪಕರಣ ಕಳುಹಿಸಲಾಗಿದೆ.

ಅಮೆರಿಕಾದ ಸರ್ಜನ್‌ ಜನರಲ್‌ ಡಾ.ವಿವೇಕ್‌ ಮೂರ್ತಿ ಅವರ ತಂದೆ ಡಾ.ಎಚ್‌.ಎನ್‌. ಲಕ್ಷ್ಮಿನರಸಿಂಹಮೂರ್ತಿ ಸ್ಕೋಪ್‌ ಫೌಂಡೇಷನ್‌ ಸ್ಥಾಪಿಸಿದ್ದು ಹಲವು ವರ್ಷಗಳಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಮೇ ತಿಂಗಳಲ್ಲಿ ಮಂಡ್ಯ ಹಾಗೂ ಕೊಡಗು ಜಿಲ್ಲೆಗಳಿಗೆ ₹ 1.41 ಕೋಟಿ ಮೌಲ್ಯದ ಉಪಕರಣ ವಿತರಿಸಿದ್ದರು. ಮಿಮ್ಸ್‌ ಆಸ್ಪತ್ರೆಗೆ ₹ 74 ಲಕ್ಷ, ಕೊಡಗು ಜಿಲ್ಲೆಗೆ ₹ 67 ಲಕ್ಷ ಮೌಲ್ಯದ ಉಪಕರಣ ಹಂಚಿಕೆ ಮಾಡಲಾಗಿತ್ತು. ಈಗ 2ನೇ ಹಂತದಲ್ಲಿ ₹ 3.5 ಕೋಟಿ ಮೌಲ್ಯದ ಮತ್ತಷ್ಟು ಉಪಕರಣ ಕಳುಹಿಸಿದ್ದಾರೆ.

‘ಈ ಬಾರಿ 50 ಆಮ್ಲಜನಕ ಕಾನ್ಸಂಟ್ರೇಟರ್‌, 3 ಲಕ್ಷ ಎನ್‌–95 ಮಾಸ್ಕ್‌, 100 ಪಲ್ಸ್‌ ಆಕ್ಸಿಮೀಟರ್‌, 5 ಸಾವಿರ ಪಿಪಿಇ ಕಿಟ್‌, 5 ಸಾವಿರ ಫೇಸ್‌ ಶೀಳ್ಡ್‌, 5 ಸಾವಿರ ವೈಪ್ಸ್‌ ಮುಂತಾದ ವಸ್ತುಗಳು ಬಂದಿವೆ. ಅವಶ್ಯಕತೆಗೆ ಅನುಗುಣವಾಗಿ ಮಂಡ್ಯ ಹಾಗೂ ದೊಡ್ಡಬಳ್ಳಾಪುರ ಜಿಲ್ಲೆಗಳ ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುವುದು. ಸಂಸದೆ ಸುಮಲತಾ ನೇತೃತ್ವದಲ್ಲಿ ಉಪಕರಣ ವಿತರಣೆ ಮಾಡಲಾಗುವುದು’ ಎಂದು ಡಾ.ಎಚ್‌.ಎನ್‌.ಲಕ್ಷ್ಮಿನರಸಿಂಹಮೂರ್ತಿ ಅವರ ಸಂಬಂಧಿ ಎಚ್‌.ಕೆ.ವಸಂತಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT