ಕೆ.ಆರ್.ಪೇಟೆ: ಮಂಡ್ಯ ಕೃಷಿಕ ಲಯನ್ಸ್ ಸಂಸ್ಥೆಯು ಈ ಸಾಲಿನ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್. ಮರಿಗೌಡ ಪ್ರಶಸ್ತಿಗೆ ತಾಲ್ಲೂಕಿನ ಸಾವಯವ ಕೃಷಿಕರೆಂದು ಹೆಸರಾಗಿರುವ ವಿಠಲಪುರ ಸುಬ್ಬೆಗೌಡರು ಆಯ್ಕೆಯಾಗಿದ್ದಾರೆ.
ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ ಮತ್ತು ಕೃಷಿಕ ಲಯನ್ ಸಂಸ್ಥೆ ಸಂಯುಕ್ತವಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಜುಲೈ 29ರಂದು ಮಧ್ಯಾಹ್ನ 12 ಗಂಟೆಗೆ ವಿಠಲಾಪುರದ ಸುಬ್ಬೇಗೌಡರ ತೋಟದಲ್ಲಿ ಹಮ್ಮಿಕೊಂಡಿದೆ.
ಸಾವಯವ ಕೃಷಿಯ ಮೂಲಕ ಸಮಗ್ರ ಕೃಷಿಗೆ ಒತ್ತು ನೀಡಿ ಕೃಷಿ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಸುಬ್ಬೆಗೌಡರಿಗೆ ರಾಜ್ಯ ಸರ್ಕಾರದ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಸುಮಾರು 22 ಎಕರೆ ತೋಟದಲ್ಲಿ ಅವರು ಸಾವಯವ ಕೃಷಿ ಕೈಗೊಂಡಿದ್ದು ಅವರನ್ನು ಅಭಿನಂದಿಸಿ ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮಕ್ಕೆ ರೈತರು ಮತ್ತು ಗ್ರಾಮಸ್ಥರು ಆಗಮಿಸಬೇಕೆಂದು ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕ.ಟಿ ಹನುಮಂತು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.