ಮದ್ದೂರು: ‘ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಲಿಂಗನವುಧೃತರಾಷ್ಟ್ರನ ಆಲಿಂಗನವಿದ್ದಂತೆ’ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಸನ್ನೆ ಮಾಡಿದ ನಂತರ ಆಲಿಂಗನ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.

‘ಶಿವಕುಮಾರ್, ಈ ಹಿಂದೆ ವಿಧಾನಸಭೆಯಲ್ಲಿ ಸುಮ್ಮನಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಕೈಹಿಡಿದು ಎತ್ತಿ ಜೋಡೆತ್ತು ಜೋಡೆತ್ತು ಎಂದಿದ್ದರು. ನಂತರ ಆ ಸಂಬಂಧಕ್ಕೆ ಕಾವೇರಿ ನದಿಯಲ್ಲಿ ಎಳ್ಳು ನೀರು ಬಿಟ್ಟರು. ಈಗ ಸಿದ್ದರಾಮಯ್ಯ ಅವರನ್ನು ಆಲಿಂಗಿಸಿಕೊಂಡಿದ್ದಾರೆ. ಅವರನ್ನು ಯಾವ ನದಿಗೆ ಎಳ್ಳು ನೀರು ಬಿಡುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

‘ಬಿಜೆಪಿ ಹಾಗೂ ಆರ್ಎಸ್ಎಸ್ ಬಗ್ಗೆ ಮಾತನಾಡಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಇರಲೇ ಇಲ್ಲ. ಪಾಕಿಸ್ತಾನ, ಚೀನಾ ಹಾಗೂ ಶತ್ರು ರಾಷ್ಟ್ರಗಳ ವಿರುದ್ಧ ಹೋರಾಡುವ ಮೂಲಕ ದೇಶ ರಕ್ಷಣೆಗೆ ಬಿಜೆಪಿ ನಿಂತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.