ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಹಿಂದಿ ಹೇರಿದರೆ ರಕ್ತಪಾತ: ಸಿದ್ದರಾಮಯ್ಯ

Last Updated 14 ಫೆಬ್ರುವರಿ 2021, 2:27 IST
ಅಕ್ಷರ ಗಾತ್ರ

ಮಂಡ್ಯ: ‘ನಾವು ಮೊದಲು ಕನ್ನಡಿಗರು, ನಂತರ ಭಾರತೀಯರು. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಹಿಂದಿ ಹೇರಿದರೆರಕ್ತಪಾತವಾಗುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕರ್ನಾಟಕ ಸಂಘದ ಆವರಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ.ಹಾಮಾನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ‘ಹಿಂದಿಯು ಉತ್ತರ ಭಾರತದ ಕೆಲವು ರಾಜ್ಯಗಳ ಭಾಷೆಯಾಗಿದೆ. ಅದುಹೇಗೆ ರಾಷ್ಟ್ರ ಭಾಷೆಯಾಗುತ್ತದೆ?’ ಎಂದು ಗುಡುಗಿದರು.

ಎಂದಿಗೂ ಅಹಿಂದ ಪರ: ‘ಅಹಿಂದ ಸಮಾವೇಶ ಮಾಡುವುದಾಗಿನಾನು ಎಲ್ಲಿಯೂ ಹೇಳಿಲ್ಲ. ಆದರೆ,ಎಂದಿಗೂನಾನು ಅಹಿಂದ ಪರ, ಆ ವರ್ಗಕ್ಕೆ ನ್ಯಾಯ ಸಿಗಬೇಕು. ಅಹಿಂದ ವಿಚಾರ ತಮಗೆ ಗೊತ್ತಿಲ್ಲ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಅವರು ಎಂದೂ ಅಹಿಂದ ಸಮಾವೇಶ ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಅಹಿಂದ ಪರ ಇದೆ. ಹೀಗಾಗಿ, ಆ ರೀತಿ ಹೇಳಿರಬಹುದು’ ಎಂದು ಸುದ್ದಿಗಾರರಿಗೆಪ್ರತಿಕ್ರಿಯಿಸಿದರು.

‘ವಿಶ್ವನಾಥ್ ಗಂಭೀರ ರಾಜಕಾರಣಿ ಅಲ್ಲ. ನನ್ನ ಬಗ್ಗೆ ಅವರಿಗೆ ಭಯ ಇರಬೇಕು. ಹೀಗಾಗಿ, ಪದೇಪದೇ ನನ್ನ ಬಗ್ಗೆಯೇ ಕನವರಿಸುತ್ತಿದ್ದಾರೆ’ ಎಂದರು.

ರಾಜ್ಯ ಬಜೆಟ್ ಬಗ್ಗೆ ನಿರೀಕ್ಷೆ ಇಲ್ಲ: ‘ರಾಜ್ಯ ಸರ್ಕಾರದಲ್ಲಿ ದುಡ್ಡಿಲ್ಲ, ಖಜಾನೆ ಖಾಲಿಯಾಗಿದೆ. ₹ 35 ಸಾವಿರ ಕೋಟಿಗೂ ಅಧಿಕ ಸಾಲ ಮಾಡಿದ್ದಾರೆ. ಸಾಲ, ಬಡ್ಡಿ, ಚಕ್ರ ಬಡ್ಡಿ ಮನ್ನಾ ಮಾಡುವುದೇ ಆಗುತ್ತದೆ. ಇನ್ನೇನು ಉತ್ತಮ ಯೋಜನೆ ನೀಡಲು ಸಾಧ್ಯ? ರಾಜ್ಯ ಬಜೆಟ್‌ ಬಗ್ಗೆ ಯಾವುದೇ ನಿರೀಕ್ಷೆಗಳಿಲ್ಲ’ ಎಂದು ಹೇಳಿದರು.

ನಾನು ಕಾಂಗ್ರೆಸ್ಸಿಗ: ‘ಇನ್ನೊಂದು ಪಕ್ಷ ಕಟ್ಟುವ ಅನಿವಾರ್ಯ ನನಗಿಲ್ಲ. ನಾನು ಕಾಂಗ್ರೆಸ್ಸಿಗ,ಈ ಪಕ್ಷ ನನಗೆ ಎಲ್ಲವನ್ನೂ ನೀಡಿದೆ’ ಎಂದು ಮದ್ದೂರಿನಲ್ಲಿ ತಿಳಿಸಿದರು.

ಸಿದ್ದರಾಮಯ್ಯಸ್ವಂತ ಬಲದಿಂದ ಪಕ್ಷ ಕಟ್ಟಿ ಐದು ಸ್ಥಾನ ಗೆದ್ದು ತೋರಿಸಲಿ ಎಂಬಎಚ್.ಡಿ.ಕುಮಾರಸ್ವಾಮಿಸವಾಲಿಗೆಈ ರೀತಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT