ಶುಕ್ರವಾರ, ಆಗಸ್ಟ್ 23, 2019
26 °C

ಯಡಿಯೂರಪ್ಪ ಸಿ.ಎಂ ಆಗಲಿ: ಹುಟ್ಟೂರಲ್ಲಿ ವಿಶೇಷ ಪೂಜೆ

Published:
Updated:
Prajavani

ಕೆ.ಆರ್.ಪೇಟೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಪ್ರಾರ್ಥಿಸಿ ಅವರ ಹುಟ್ಟೂರು ಬೂಕನಕೆರೆ ಗ್ರಾಮದಲ್ಲಿ ಮಂಗಳವಾರ ಅಭಿಮಾನಿಗಳು, ಬಿಜೆಪಿ ಮುಖಂಡರು ಗ್ರಾಮದೇವತೆ ಗೋಗಲ್ಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸೋಮವಾರ ರಾತ್ರಿಯಿಂದಲೇ ಗ್ರಾಮದ ಹಲವು ದೇವಾಲಯಗಳನ್ನು ಸ್ವಚ್ಛಗೊಳಿಸಿ ತಳಿರು, ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಮಂಗಳವಾರ ನಸುಕಿನಿಂದಲೇ ಗಣಹೋಮ, ಅಭಿಷೇಕ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಯಡಿಯೂರಪ್ಪ ಅವರ ಮನೆ ದೇವರಾದ ಕಾಪನಹಳ್ಳಿ ಗವಿಮಠದ ಸ್ವತಂತ್ರ ಸಿದ್ಧಲಿಂಗೇಶ್ವರರ ಸನ್ನಧಿಯಲ್ಲಿಯೂ ವಿಶೇಷ ಪೂಜೆ ನೆರವೇರಿಸಲಾಯಿತು.

ಯಡಿಯೂರಪ್ಪ ಅವರು ಆಗಾಗ ಹುಟ್ಟೂರಿಗೆ ಬಂದು ಗೋಗಲಮ್ಮನಿಗೆ ಪೂಜೆ ಸಲ್ಲಿಸುತ್ತಾರೆ. ಸಮ್ಮಿಶ್ರ ಸರ್ಕಾರ ಪತನವಾಗಲಿದ್ದು ಬೂಕನಕರೆಯ ಪುತ್ರ ಮುಖ್ಯಮಂತ್ರಿಯಾಗಬೇಕು ಎಂದು ಅಭಿಮಾನಿಗಳು ಪ್ರಾರ್ಥಿಸಿದರು.

ಪೂಜಾ ಕೈಂಕರ್ಯದಲ್ಲಿ ಯಡಿಯೂರಪ್ಪ ಸಹೋದರಿ ಪ್ರೇಮಮ್ಮ, ಅವರ ಮಗ ಅಶೋಕ್ ಹಾಗೂ ಸೊಸೆ ಸಂಧ್ಯಾರಾಣಿ , ಬಿಜೆಪಿ ಪಕ್ಷದ ಮುಖಂಡರಾದ ಕೆ.ಎಸ್.ನಂಜುಂಡೇಗೌಡ , ಬೂಕನಕೆರೆ ಮಧುಸೂದನ್, ಮೀನಾಕ್ಷಮ್ಮ, ಪುಟ್ಟರಾಜು, ತೋಟಪ್ಪ ಇದ್ದರು.

ಇನ್ನಷ್ಟು... 

ನಾನು ಸುಪ್ರೀಂ ಕೋರ್ಟ್‌ಗಿಂತ ದೊಡ್ಡವನಲ್ಲ: ಕೆ.ಆರ್‌.ರಮೇಶ್‌ಕುಮಾರ್‌ ಹೇಳಿಕೆ

ವಿಶ್ಲೇಷಣೆ | ಪ್ರಜಾಪ್ರಭುತ್ವಕ್ಕೆ ಇರಿತ: ಭಾಗಿಯೇ ಸಾಕ್ಷಿ!

ಶಾಸಕರ ರಾಜೀನಾಮೆ: ‘ಕೇಳುವ ಹಕ್ಕು’ ಮತದಾರನಿಗೆ ಇದೆ

ಅನ್ನ ಹಳಸಿತ್ತು, ನಾಯಿ ಹಸಿದಿತ್ತು

‘ಮೈತ್ರಿ’ಗೆ ವರ್ಷ: ಸಂಭ್ರಮವೋ, ಶೋಕವೋ?

ಮೈತ್ರಿ ಸರ್ಕಾರದ ಬಿಕ್ಕಟ್ಟು | ರಾಹುಲ್‌ ಅನುಪಸ್ಥಿತಿ, ಸೋನಿಯಾ ಅಖಾಡಕ್ಕೆ

ಮದ್ದಿಲ್ಲದ ರೋಗ; ಮಧ್ಯಂತರ ರಾಗ

ಕೇಂದ್ರದಲ್ಲೇ ನಡುಗುತ್ತಿರುವ ‘ಕೈ’ಗೆ ಬಲ ತುಂಬಲಿದೆಯೇ ರಾಹುಲ್ ತಂತ್ರಗಾರಿಕೆ?

ಫಲಿತಾಂಶ ವಿಶ್ಲೇಷಣೆ | ಉಳಿಯುತ್ತಾ, ಉರುಳುತ್ತಾ ರಾಜ್ಯದ ಮೈತ್ರಿ ಸರ್ಕಾರ

ರಾಜಕೀಯ ವಿಶ್ಲೇಷಣೆ | ಈಗೇಕೆ ಸಿಡಿಯಿತು ದೇವೇಗೌಡರ ‘ಮಧ್ಯಂತರ ಚುನಾವಣೆ’ ಬಾಂಬ್

Post Comments (+)