ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ತಿಕ ಮಾಸ: ಲಕ್ಷದೀಪೋತ್ಸವ, ದೀಪಾಲಂಕಾರ

ಕಡೆ ಸೋಮವಾರದಂದು ದೇವಾಲಯಗಳಲ್ಲಿ ವಿಶೇಷ ಪೂಜೆ; ದೀಪ ಹಚ್ಚಿದ ಭಕ್ತರು
Published 11 ಡಿಸೆಂಬರ್ 2023, 16:10 IST
Last Updated 11 ಡಿಸೆಂಬರ್ 2023, 16:10 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ತಾಲ್ಲೂಕಿನ ವಿವಿಧ ಶಿವ ದೇವಾಲಯಗಳಲ್ಲಿ ಕಾರ್ತೀಕ ಮಾಸದ ಕಡೆ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ, ರುದ್ರಾಭಿಷೇಕ, ಸಹಸ್ರ ಬಿಲ್ವ ಪತ್ರಾರ್ಚನೆ, ದೀಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಪಟ್ಟಣದ ಶ್ರವಣಬೆಳಗೊಳ ರಸ್ತೆಯ ಸೋಮವಾರದ ಪ್ರಯುಕ್ತ ಮಲ್ಲಿಕಾರ್ಜುನ ಸ್ವಾಮಿ ದೇವರಿಗೆ 21 ರುದ್ರಾಭಿಷೇಕದೊಂದಿಗೆ ಬಿಲ್ವಾರ್ಚನೆ ನೆರವೇರಿಸಿ ನೆರವೇರಿಸಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.

ಧಾರ್ಮಿಕ ಚಿಂತಕ ಗೋಪಾಲ ಕೃಷ್ಣ ಅವದಾನಿ, ಪುರೋಹಿತರಾದ ರೋಹಿತ್ ಶರ್ಮ ಮತ್ತು ಮಾಲತೇಶಭಟ್ಟ ಅವರ ನೇತೃತ್ವದಲ್ಲಿ ನಡೆದ ರುದ್ರಾಭಿಷೇಕ ಪೂಜೆಯಲ್ಲಿ ಭಾಗವಹಿಸಿದ್ದರು. ಸಂಜೆ ದೀಪೋತ್ಸವ ನೆರವೇರಿತು.

ಹೊಸಹೊಳಲಿನ ಪ್ರಾಚೀನ ದೇವಾಲಯವಾದ ಕೋಟೆ ಬೈರವೇಶ್ವರ ದೇವಸ್ಥಾನದಲ್ಲಿ ಕಡೆ ಕಾರ್ತೀಕ ಸೋಮವಾರದ ಪ್ರಯುಕ್ತ ಲಕ್ಷ ದೀಪೋತ್ಸವ ನಡೆಯಿತು. ದೇವಾಲಯದಲ್ಲಿ ಭಕ್ತರು ಕಾರ್ತೀಕ ದೀಪಗಳನ್ನು ಹಚ್ಚಿ ಭಕ್ತಿ ಸಮರ್ಪಿಸಿದರು.

ಬೆಡದಹಳ್ಳಿಯ ಪಂಚಭೂತೇಶ್ವರ ದೇವಸ್ಥಾನ, ಅಗ್ರಹಾರಬಾಚಹಳ್ಲೀ ಅಮೃತೇಶ್ವರದೇವಸ್ಥಾನ, ಮಾಳಗೂರಿನ ಕರ್ಮಡೇಶ್ವರ ದೇವಸ್ಥಾನ, ಕಿಕ್ಕೇರಿ ಬ್ರಹ್ಮೇಶ್ವರ ದೇವಸ್ಥಾನ, ಮಾಚಗೋನಹಳ್ಲೀ ಭೈರವೇಶ್ವರ ದೇವಸ್ಥಾನ, ಶೀಳನೆರೆ ಈಶ್ವರ ದೇವಸ್ಥಾನ, ಭೈರಾಪುರದ ಭೈರವೇಶ್ವರ ದೇವಸ್ಥಾನ, ಬಲ್ಲೇನಹಳ್ಲಿಯ ಬೋರೇದೇವರ ದೇವಸ್ಥಾನ , ತೊಳಸಿ ಮತ್ತು ತೆಂಗಿನ ಘಟ್ಟದ ಈಶ್ವರ ದೇವಸ್ಥಾನ, ಗೋವಿಂದನಹಳ್ಲೀಯ ಪಂಚಲಿಂಗೇಶ್ವರ ದೇವಸ್ಥಾನ , ಅಘಲಯದ ಮಲ್ಲೇಶ್ವರ ದೇವಸ್ಥಾನ , ಸಿಂಧುಘಟ್ಟದ ಜಪ್ಪೇಶ್ವರ ದೇವಸ್ಥಾನ, ಸಂತೇಬಾಚಹಳ್ಲಿಯ ಮಹಾಲಿಂಗೇಶ್ವರ ದೇವಸ್ಥಾನ, ತ್ರಿವೇಣಿ ಸಂಗಮದ ಮಲೈ ಮಹಾದೇಶ್ವರ ಮತ್ತು ಸಂಗಮೇಶ್ವರ ದೇವಸ್ಥಾನ, ಸೇರಿದಂತೆ ತಾಲ್ಲುಕಿನ ವಿವಿಧೆಡೆ ವಿಶೇಷ ಪೂಜೆಗಳು ನಡೆದವು.

ದೇವಸ್ಥಾನಗಳಲ್ಲಿ ತೀರ್ಥ ಪ್ರಸಾದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT