ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ: ಕರಗ ಮಹೋತ್ಸವ ಇಂದಿನಿಂದ

Last Updated 15 ಮಾರ್ಚ್ 2021, 3:44 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಮುತ್ತುಲಕ್ಷ್ಮಿ ಮಾರಮ್ಮನ ಕರಗ ಮಹೋತ್ಸವ ಪಟ್ಟಣದಲ್ಲಿ ಸೋಮವಾರದಿಂದ ಎರಡು ದಿನಗಳ ಕಾಲ ನಡೆಯಲಿದೆ.

ಸೋಮವಾರ ಸಂಜೆ ಕಾವೇರಿ ನದಿಯ ಸೋಪಾನ ಕಟ್ಟೆಯಿಂದ ಕರಗ ಮಹೋತ್ಸವ ಆರಂಭವಾಗಲಿದೆ. ಮುತ್ತುಲಕ್ಷ್ಮಿ ಮಾರಮ್ಮ ದೇಗುಲದ ಗುಡ್ಡಪ್ಪ ಕುಮಾರ್‌ ಕರಗವನ್ನು ಹೊರಲಿದ್ದಾರೆ. ಮಂಗಳವಾರ ಮುಂಜಾನೆ ವರೆಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗದ ಉತ್ಸವ ನಡೆಯಲಿದೆ. ಮುಂಜಾನೆ ವೇಳೆಗೆ ಪಟ್ಟಣದ ರೈಲ್ವೆ ನಿಲ್ದಾಣದ ಬಳಿಯ ಮುತ್ತುಲಕ್ಷ್ಮಿ ಮಾರಮ್ಮ ದೇವಾಲಯಕ್ಕೆ ಕರಗ ತಲುಪಲಿದೆ. ದೇವಾಲಯದ ಮುಂದೆ ಕೊಂಡವನ್ನು ಸಿದ್ದಪಡಿಸಿದ್ದು, ಗುಡ್ಡಪ್ಪ ಮತ್ತು ಭಕ್ತರು ಕೊಂಡ ಹಾಯಲಿದ್ದಾರೆ.

ಕರಗ ಮಹೋತ್ಸವದ ನಿಮಿತ್ತ ಮುತ್ತುಲಕ್ಷ್ಮೀ ಮಾರಮ್ಮ ಹಾಗೂ ಮುನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ. ವರ್ಷದ ಹಿಂದೆ ದೇವಾಲಯದ ಮುಂದೆ ಮಣ್ಣಿನಲ್ಲಿ ಹುದುಗಿಸಿರುವ ನಿಂಬೆ ಹಣ್ಣನ್ನು ತೆಗೆಯುವ ಪ್ರಕ್ರಿಯೆ ನಡೆಯಲಿದೆ.

ಭಕ್ತರು ಗರ್ಭಗುಡಿ ಪ್ರವೇಶಿಸಿ ತಾವೇ ಪೂಜೆ ಸಲ್ಲಿಸುವುದು ಈ ದೇವಾಲಯದ ವಿಶೇಷವಾಗಿದ್ದು, ಮಂಗಳವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅನ್ನ ಸಂತರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT