ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀರಂಗಪಟ್ಟಣ | ಸೃಜಶೀಲ ದೃಷ್ಟಿಕೋನ ಮುಖ್ಯ: ರಮೇಶ್‌

Published 25 ನವೆಂಬರ್ 2023, 15:38 IST
Last Updated 25 ನವೆಂಬರ್ 2023, 15:38 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ; ಕತೆ, ಕವನ, ನಾಟಕ ಇತರ ಪ್ರಕಾರದ ಸಾಹಿತ್ಯ ರಚನೆಗೆ ಸೃಜಶೀಲ ದೃಷ್ಟಿಕೋನ ಬಹಳ ಮುಖ್ಯ ಎಂದು ಸಾಹಿತಿ ನೀ.ಗೂ. ರಮೇಶ್ ಹೇಳಿದರು.

ತಾಲ್ಲೂಕಿನ ಕೆಆರ್‌ಎಸ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ನಡೆದ ‘ಸಾಹಿತ್ಯ ರಚನಾ ಕಮ್ಮಟ’ದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಂತರ್ಗತ ವಾಗಿರುತ್ತದೆ. ಅದು ಪ್ರಕಾಶಮಾನಕ್ಕೆ ಬರಬೇಕಾದರೆ ಪ್ರೇರಣೆ ಮತ್ತು ಮಾರ್ಗದರ್ಶನ ಬೇಕು. ಈ ದಿಸೆಯಲ್ಲಿ ಸಾಹಿತ್ಯ ಕಮ್ಮಟಗಳು ಪ್ರತಿಭೆಗಳನ್ನು ಬೆಳಕಿಗೆ ತರಲು ಸಹಕಾರಿಯಾಗಿವೆ ಎಂದರು. ಇದೇ ವೇಳೆ ಅವರು ಕವನ ವಾಚಿಸುವ ಮೂಲಕ ಕನ್ನಡ ಸಂಘವನ್ನು ಉದ್ಘಾಟಿಸಿದರು.

ಕಾಲೇಜಿ ಕನ್ನಡ ವಿಭಾಗದಿಂದ ‘ಬೃಂದಾವನ’ ಹೆಸರಿನ ಗೋಡೆ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ವಿದ್ಯಾರ್ಥಿಗಳಿಗೆ ಪದಬಂಧ, ಚುಟುಕು, ಕತೆ, ಕವನ ರಚನಾ ಕಮ್ಮಟ ನಡೆಯಿತು.

ಕನ್ನಡ ವಿಭಾಗದ ಮುಖ್ಯಸ್ಥೆ ಹಾಗೂ ಐಕ್ಯೂಎಸಿ ಸಂಚಾಲಕರಾದ ಎಚ್‌.ವಿ. ಶಿಲ್ಪಶ್ರೀ ಪ್ರಾಸ್ತಾವಿಕ ಮಾತುಗಳಾಡಿದರು. ಆಂಗ್ಲ ಭಾಷಾ ವಿಭಾಗದ ಮುಖ್ಯಸ್ಥ ಪ್ರಸಾದ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಇಂದಿರಾ ಇದ್ದರು. ವಿದ್ಯಾರ್ಥಿಗಳು ಸ್ವರಚಿತ ಸಾಹಿತ್ಯ ಪ್ರಕಾರಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT