ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLC Result 2024 | ಮಳವಳ್ಳಿ: ಐದು ಶಾಲೆಗಳಿಗೆ ಪೂರ್ಣ ಫಲಿತಾಂಶ

Published 9 ಮೇ 2024, 13:06 IST
Last Updated 9 ಮೇ 2024, 13:06 IST
ಅಕ್ಷರ ಗಾತ್ರ

ಮಳವಳ್ಳಿ: 2023-24ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತಾಲ್ಲೂಕಿನ ಐದು ಶಾಲೆಗಳು ಪೂರ್ಣ ಫಲಿತಾಂಶ ಪಡೆದಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಚಂದ್ರಪಾಟೀಲ್ ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ 625ಕ್ಕೆ 621 ಅಂಕ ಪಡೆದು ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿರುವ ವಿದ್ಯಾರ್ಥಿ ಎಚ್.ವಿ.ವಿನಯ್ ಹಾಗೂ 615 ಅಂಕ ಪಡೆದ ಎಚ್.ಎನ್.ರೇಷ್ಮಾ ಅವರನ್ನು ಅಭಿನಂದಿಸಿದರು.

ತಾಲ್ಲೂಕಿನಲ್ಲಿ 1620 ಬಾಲಕಿಯರು ಹಾಗೂ 1531 ಬಾಲಕರು ಸೇರಿ 3151 ಮಂದಿ ಪರೀಕ್ಷೆ ಬರೆದಿದ್ದರು. ಅವರಲ್ಲಿ 1320 ಬಾಲಕಿಯರು ಹಾಗೂ 947 ಬಾಲಕರು ಉತ್ತೀರ್ಣರಾಗಿದ್ದಾರೆ. ವಿವಿಧ ಶಾಲೆಗಳ ಎಚ್.ವಿ.ವಿನಯ್(621), ಎಚ್.ಎನ್.ರೇಷ್ಮಾ(615), ಎಲ್.ಸ್ನೇಹ(615), ಬಿ.ಶ್ರೀರಕ್ಷಾ(610), ಎಚ್.ಎಸ್.ತೇಜಶ್ರೀ(609), ಜಿ.ಎಂ.ಚಿರಂಜೀವಿ(609), ವೇದಿಕಾ ಮಹೇಶ್(608), ಎಚ್.ಪಿ.ಭೂಮಿಕಾ(606), ಎಂ.ಆರ್.ತಾರಣಿ(605), ಎಚ್.ಎಸ್.ರಕ್ಷಿತಾ(604), ಕೆ.ಎಂ.ಮೋನಿಕಾ(603), ಬಿ.ಎನ್.ತೇಜಶ್ವಿನಿ(602), ಕೆ.ಪಿ.ಅರ್ಚನಾ(602), ಜಿ.ನಾಗು(602), ಕೆ.ಆರ್.ನಿತ್ಯಶ್ರೀ(602) ಟಿ.ಆರ್.ಬಿಂಧುಶ್ರೀ(602), ಬಿ.ಆರ್.ರಕ್ಷಿತಾ(601) ಅಂಕ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

ತಾಲ್ಲೂಕಿನ ಪಂಡಿತಹಳ್ಳಿ ಹೋಲಿ ಏಂಜಲೇನ್ಸ್, ಹಲಗೂರು ಹೋಬಳಿ ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆ, ಹಲಗೂರಿನ ಮೊರಾರ್ಜಿ ವಸತಿ ಶಾಲೆ, ಜೆ.ಜೆ.ಪಬ್ಲಿಕ್ ಸ್ಕೂಲ್, ಸಪ್ತಗಿರಿ ಶಾಲೆಗಳು  ಪೂರ್ಣ ಫಲಿತಾಂಶ ಪಡೆದಿವೆ.

ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಇನ್ನೆರಡು ಅವಕಾಶವಿದೆ. ಅಂತಹ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿ ಅವರನ್ನು ಪರೀಕ್ಷೆಗೆ ತಯಾರು ಮಾಡುವಂತೆ ಈಗಾಗಲೇ ಸಂಬಂಧಿಸಿದ ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಅನುತ್ತೀರ್ಣರಾದ ಮಕ್ಕಳು ಧೃತಿಗೆಡದೆ ಪರೀಕ್ಷೆ ಎದುರಿಸುವಂತೆ ಸಲಹೆ ನೀಡಿದರು. ಶಿಕ್ಷಣ ಸಂಯೋಜಕ ಡಿ.ಬಿ.ದಯಾನಂದ ಇದ್ದರು.

ಅನಿತಾ ಪ್ರೌಢಶಾಲೆ: ಪಟ್ಟಣದ ಅನಿತಾ ಪ್ರೌಢಶಾಲೆಯಲ್ಲಿ 2023-24ನೇ ಸಾಲಿನಲ್ಲಿ ಪರೀಕ್ಷೆ ಬರೆದಿದ್ದ 92 ವಿದ್ಯಾರ್ಥಿಗಳಲ್ಲಿ 89 ಮಂದಿ ಉತ್ತೀರ್ಣರಾಗಿದ್ದಾರೆ. ಅವರಲ್ಲಿ 27 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 38 ವಿದ್ಯಾರ್ಥಿಗಳು ಪ್ರಥಮಶ್ರೇಣಿ, 17 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿ ಹಾಗೂ 7 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಶಾಲೆಯ ಮುಖ್ಯಶಿಕ್ಷಕಿ ಆಶಾ ತಿಳಿಸಿದ್ದಾರೆ.

ಎಲ್.ಸ್ನೇಹ-615(ಶೇ.98.4), ಕೆ.ಪಿ.ಅರ್ಚನಾ-602(ಶೇ.96.32), ಟಿ.ಆರ್.ಬಿಂಧುಶ್ರೀ-602(96.32) ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT