ಪಾಂಡವಪುರ: ತಾಲ್ಲೂಕಿನ ಬೇಬಿ ಬೆಟ್ಟದ ಗಣಿಗಾರಿಕೆ ಪ್ರದೇಶಕ್ಕೆ ಸಂಸದೆ ಸುಮಲತಾ ಭೇಟಿ ನೀಡಿ ಗಣಿಗಾರಿಕೆ, ಕಲ್ಲು ಕ್ರಷರ್‌ಗಳನ್ನು ವೀಕ್ಷಿಸಿದರು.

ಸಂಸದೆ ಸುಮಲತಾ ಬೇಬಿಬೆಟ್ಟ ಪ್ರವೇಶಿಸುತ್ತಿದ್ದಂತೆಯೇ ಕಾವೇರಿ ಪುರದಲ್ಲಿ ಅಲ್ಲಿನ ಭೋವಿ ಸಮುದಾಯದವರು ‘ತಾವು ಹಲವು ವರ್ಷಗಳಿಂದ ಸಣ್ಣಪುಟ್ಟ ಕಲ್ಲುಕುಟಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ನಮಗೆ ಕಷ್ಟವಾಗಿದೆ. ನಮಗೆ ಸಣ್ಣಪುಟ್ಟ ಕಲ್ಲುಕುಟಿ ಮಾಡಲು ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ಬಳಿಕ ಎಸ್‌ಎಲ್‌ವಿ ಸ್ಟೋನ್ ಕ್ರಷರ್, ಎಸ್‌ಟಿಜಿ ಗ್ರೂಪ್ ಸ್ಟೋನ್ ಕ್ರಷರ್, ಸಿದ್ದೇಶ್ವರ ಸ್ಟೋನ್ ಕ್ರಷರ್, ನಿತಿನ್ ಸ್ಟೋನ್ ಕ್ರಷರ್, ಕರ್ನಾಟಕ ಸ್ಟೋನ್ ಕ್ರಷರ್ ಸೇರಿದಂತೆ ಸುಮಾರು 8 ಕ್ರಷರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ...ಕೆಆರ್‌ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ನಾನು ಎಲ್ಲಿಯೂ ಹೇಳಿಲ್ಲ: ಸುಮಲತಾ

ಕಾರ್ಮಿಕರ ಮನವಿ: ‘ಕಲ್ಲು ಗಣಿಗಾರಿಕೆ ಯಿಂದ ನಾವು ಜೀವನ ನಡೆಸುತ್ತಿದ್ದೇವೆ. ಗಣಿಗಾರಿಕೆ ಸ್ಥಗಿತಗೊಂಡಿರುವುದರಿಂದ ನಮಗೆ ಕಷ್ಟವಾಗಿದೆ. ಗಣಿಗಾರಿಕೆಗೆ ಅವಕಾಶ ನೀಡಿ’ ಎಂದು ಮನವಿ ಮಾಡಿದರು.

ಪರ ವಿರೋಧ ಮಾತಿನ ಚಕಮಕಿ: ಸಂಸದೆ ಸುಮಲತಾ ಭೇಟಿ ನೀಡಿದ್ದ ವೇಳೆ ಗಣಿಮಾಲೀಕರ ಪರವಾಗಿ ಕೆಲವರು ಗಣಿಗಾರಿಕೆ ಅವಕಾಶ ನೀಡಿ ಎಂದು ಘೋಷಣೆ ಕೂಗಿದರು. ಆದರೆ ಬೇಬಿ ಗ್ರಾಮ ಸೇರಿದಂತೆ ಅಕ್ಕಪಕ್ಕದ ಕೆಲ ಜನರು ಗಣಿಗಾರಿಕೆ ನಿಲ್ಲಿಸಿ ನಮ್ಮ ಗ್ರಾಮಗಳನ್ನು ಉಳಿಸಿ ಎಂದು ಘೋಷಣೆ ಕೂಗಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.

ರೈತ ಸಂಘದ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಎ.ಎಲ್.ಕೆಂಪೂಗೌಡ, ಚಿಕ್ಕಾಡೆ ಹರೀಶ್, ಕೆನ್ನಾಳು ವಿಜಯಕುಮಾರ್ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು. ಗಣಿಗಾರಿಕೆ ನಿಲ್ಲಿಸಿ ಕೆಆರ್‌ಎಸ್ ಉಳಿಸಿ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು. ಒಂದು ರೀತಿಯಲ್ಲಿ ಸಂಸದೆ ಸುಮಲತಾ ಅವರಿಗೆ ಬೆಂಬಲ ಸೂಚಿಸಿದರು.

*ಗಣಿ ಸ್ಫೋಟ ನಡೆಯುತ್ತಿದ್ದರೂ ಕೆಆರ್‌ಎಸ್ ಹೇಗೆ ಸುರಕ್ಷಿತ: ಸಂಸದೆ ಸುಮಲತಾ ಪ್ರಶ್ನೆ

ಸಂಸದೆ ಸುಮಲತಾ, ಗಣಿಗಾರಿಕೆ ಹಾಗೂ ಸ್ಟೋನ್ ಕ್ರಷರ್‌ಗಳನ್ನು ವೀಕ್ಷಿಸಿ, ಇಲ್ಲಿನ ಗಣಿಗಾರಿಕೆಯಲ್ಲಿ ಇಷ್ಟೊಂದು ಆಳವಾಗಿ ಹೊಂಡಗಳು ನಿರ್ಮಾಣವಾಗಿವೆ. ಈ ಬಗ್ಗೆ ಮಾಹಿತಿ ನೀಡಿ ಎಂದು ಸಂಸದೆ, ಗಣಿ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಗಣಿ ಅಧಿಕಾರಿಗಳು ಸಮರ್ಪಕವಾಗಿ ಮಾಹಿತಿ ನೀಡಲು ತಡವರಿಸಿದರು. ಇದರಿಂದ ಬೇಸರಗೊಂಡ ಸಂಸದೆ, ಅಧಿಕಾರಿಗಳ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದರು.

‘ಗಣಿ ಅಧಿಕಾರಿಗಳಲ್ಲಿ ಮಾಹಿತಿ ಕೊರತೆ ಇದೆ. ಗಣಿಗಾರಿಕೆ ಬಗ್ಗೆ ಪೂರ್ವ ಸಿದ್ದತೆಯಾಗದೆ ಬಂದಿದ್ದಾರೆ. ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ. ಬೇಜಾವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಹಾಗಾಗಿ ಗಣಿ ಅಧಿಕಾರಿಗಳ ಅಸಮರ್ಥತೆಯ ಬಗ್ಗೆ ಗಣಿ ಸಚಿವರ ಮತ್ತು ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಸಂಸದೆ ಸುಮಲತಾ ಹೇಳಿದರು.

ಇನ್ನಷ್ಟು ಸುದ್ದಿಗಳು
*ಅಕ್ರಮ ಗಣಿಗಾರಿಕೆ – ಕರಗುತ್ತಿದೆ ಬೆಟ್ಟ, ಏರುತ್ತಿದೆ ದಂಡ!
*ಬೇಬಿಬೆಟ್ಟ: ಗಣಿಗಾರಿಕೆ ಶಾಶ್ವತ ನಿಷೇಧಕ್ಕೆ ಒತ್ತಾಯ
*ಅಕ್ರಮ ಗಣಿಗಾರಿಕೆ ಪರಿಣಾಮ ಕುರಿತ ಪ್ರಜಾವಾಣಿ ವರದಿ ಉಲ್ಲೇಖಿಸಿ ಸುಮಲತಾ ಟ್ವೀಟ್
*ಮಂಡ್ಯ: ‘ನಿಶ್ಶಬ್ದ ಸ್ಫೋಟ’ದಿಂದ ಅಂತರ್ಜಲ ಕಲುಷಿತ
*ಅಕ್ರಮ ಗಣಿಗಾರಿಕೆ: ಸತ್ಯದ ಪರ ನಿಂತಾಗ ಶತ್ರುಗಳು ಹೆಚ್ಚು – ಸುಮಲತಾ ಟ್ವೀಟ್
*‘ಸುಮಲತಾ ಮಾಟಗಾತಿಯಾ?’: ಶಾಸಕ ರವೀಂದ್ರ ಶ್ರೀಕಂಠಯ್ಯ
*ಡ್ಯಾಂ ಬಿರುಕಿನ ಚರ್ಚೆ: ಸುಳ್ಳುಸುದ್ದಿ ಸೃಷ್ಟಿಸಿದ ಗೊಂದಲ
*ಮಂಡ್ಯ: ಕೈಕುಳಿಯಿಂದ ಮೆಗ್ಗರ್ ಸ್ಫೋಟದವರೆಗೆ ಬೇಬಿಬೆಟ್ಟ!
*ಕನ್ನಂಬಾಡಿ ಬಿರುಕು ವಿಚಾರ; ಸಿಎಂ ಸ್ಪಷ್ಟಪಡಿಸಲಿ–ಎಚ್.ವಿಶ್ವನಾಥ್
*ಕುಮಾರಸ್ವಾಮಿ ವಿರುದ್ಧದ ಟೀಕೆ: ರಾಕ್ಲೈನ್ ವೆಂಕಟೇಶ್ ಮನೆಗೆ ಮುತ್ತಿಗೆ
*ನೀವು ಶಾಸಕರೋ, ಭಯೋತ್ಪಾದಕರೋ: ಜೆಡಿಎಸ್ ಶಾಸಕರ ವಿರುದ್ಧ ಸಂಸದೆ ಸುಮಲತಾ ಆಕ್ರೋಶ
*ಬೇಬಿಬೆಟ್ಟ: ನಿತ್ಯ 1,200 ಟ್ರಕ್ ಜಲ್ಲಿ ರವಾನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.