‘ಈ ವಿದ್ಯಾರ್ಥಿಗಳು ವಾರದಲ್ಲಿ ನಾಲ್ಕು ದಿನವೂ ಲೇಟಾಗಿ ಬರುತ್ತಿದ್ದರು, ತಡವಾಗಿ ಬರುವುದಲ್ಲದೇ ಶಾಲೆಯ ನಿಯೋಜನೆ ಕಾರ್ಯ ಮಾಡುತ್ತಿರಲಿಲ್ಲ ಜೊತೆಗೆ ಶಿಕ್ಷಕರ ಮಾತನ್ನು ಕೇಳುತ್ತಿರಲಿಲ್ಲ, ಅದರ ಭಾಗವಾಗಿ ಸೋಮವಾರವು ಸಹ ತಡವಾಗಿ ಬಂದಿದ್ದಾರೆ, ಇದರಿಂದ ಬೇಸರಗೊಂಡ ನಾವು ಕೇವಲ 10 ನಿಮಿಷ ಮಾತ್ರ ಶಾಲೆಯ ಕೊಠಡಿ ಹೊರಗಡೆ ನಿಲ್ಲಿಸಿದ್ದೆವು, ವಿದ್ಯಾರ್ಥಿಗಳಿಗೆ ಇಷ್ಟು ಶಿಕ್ಷೆಕೊಡಲು ನಮ್ಮ ಶಿಕ್ಷಕರಿಗೆ ಅಧಿಕಾರವಿಲ್ಲವೇ’ ಎಂದು ಶಾಲೆಯ ಮುಖ್ಯಶಿಕ್ಷಕಿ ಸೌಮ್ಯ ಕುಲಕರ್ಣಿ ಪ್ರಶ್ನಿಸಿದರು.