ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯಶ್ಚಿತ್ತಕ್ಕಾಗಿ ಸಹಸ್ರ ಕಳಶಾಭಿಷೇಕ

Last Updated 24 ಫೆಬ್ರುವರಿ 2021, 3:47 IST
ಅಕ್ಷರ ಗಾತ್ರ

ಮೇಲುಕೋಟೆ (ಮಂಡ್ಯ): ಕಳೆದ ವರ್ಷ ಕೋವಿಡ್‌ನಿಂದ ವೈರಮುಡಿ ಬ್ರಹ್ಮೋತ್ಸವ ರದ್ದಾದ ಕಾರಣಕ್ಕೆ, ಪ್ರಾಯಶ್ಚಿತ್ತಪೂರ್ವಕವಾಗಿ ಮಾರ್ಚ್‌ 5ರಂದು ಸಹಸ್ರ ಕಳಶಾಭಿಷೇಕ ಧಾರ್ಮಿಕ ಕಾರ್ಯಕ್ರಮ ಚೆಲುವನಾರಾಯಣಸ್ವಾಮಿ ಸನ್ನಿಧಿಯಲ್ಲಿ ನಡೆಯಲಿದೆ.

ಮಾರ್ಚ್ 3ರಿಂದ 6ರವರೆಗೆ 4 ದಿನಗಳ ಕಾಲ, ವಿವಿಧ ಧಾರ್ಮಿಕ ಕೈಂಕರ್ಯ ನೆರವೇರಲಿವೆ. ಮಾರ್ಚ್‌ 3ರಂದು ಅಂಕುರಾರ್ಪಣ, 4ರಂದು ಕಳಶ ಪ್ರತಿಷ್ಠಾಪನೆ, 5ರಂದು ಸಹಸ್ರಕಳಶಾಭಿಷೇಕ, 6ರಂದು ಅನ್ನಕೋಟಿ ಕಾರ್ಯಕ್ರಮ ನಿಗದಿಯಾಗಿದೆ.

‘ಈಶ್ವರ ಸಂಹಿತೆಯಲ್ಲಿ ಉಲ್ಲೇಖಿಸಿದ್ದನ್ನು ಆಧರಿಸಿ, ಸಹಸ್ರಕಳಶಾಭಿಷೇಕ ನಡೆಯಲಿದೆ’ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಗಮ ಪಂಡಿತ ವಿಜಯಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT