ಮಳವಳ್ಳಿ: ಪಟ್ಟಣ ಹೊರವಲಯದ ಟೋಲ್ ಗೇಟ್ ಬಳಿ ಸೋಮವಾರ ಸಂಜೆ ಕೆಎಸ್ಆರ್‌ಟಿಸಿ ಬೈಕ್‌ಗೆ ಬಸ್ ಡಿಕ್ಕಿ ಹೊಡೆದು, ತಾಲ್ಲೂಕಿನ ಸುಜ್ಜಲೂರು ಗ್ರಾಮದ ಕುಳ್ಳನಿಂಗಯ್ಯ ಅವರ ಪುತ್ರ ಗೋವಿಂದರಾಜು (29) ಮೃತಪಟ್ಟರು.
ಗೋವಿಂದರಾಜು ಅಂಚೆದೊಡ್ಡಿ ಗ್ರಾಮದಿಂದ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಮಳವಳ್ಳಿಯಿಂದ ಕನಕಪುರದ ಕಡೆಗೆ ಹೋಗುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ.
ಸ್ಥಳಕ್ಕೆ ಪಿಎಸ್ಐ ಶ್ರವಣ ಐ. ದಾಸರಡ್ಡಿ ಭೇಟಿ ನೀಡಿ ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.