ಮಂಡ್ಯ: ‘ಕೆಆರ್ಎಸ್ ಅಣೆಕಟ್ಟೆಗೆ ಅಪಾಯ ಇದೆಯೇ ಎನ್ನುವುದನ್ನು ತಿಳಿಯಲು ಪರೀಕ್ಷಾರ್ಥ ಸ್ಫೋಟ ನಡೆಸು ವುದು ಮೂರ್ಖತನ. ಈ ಮೂಲಕ ಸರ್ಕಾರ ಮುಂದಿನ ಚುನಾವಣೆಗೆ ಹಣ ಮಾಡಿಕೊಳ್ಳಲು ಹೊರಟಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕಿಸಿದರು.

ಪರೀಕ್ಷಾರ್ಥ ಸ್ಫೋಟ ನಡೆಸಿ ಗಣಿಗಾರಿಕೆಗೆ ಅನುಕೂಲ ಮಾಡಿಕೊಡಲು ಸರ್ಕಾರ ಮುಂದಾಗಿದೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ದೇಶದಲ್ಲಿ ಒಂದು ಅಣೆಕಟ್ಟೆ ಅಥವಾ ಒಂದು ಸಣ್ಣ ಕೆರೆ ಕಟ್ಟಿಸಲು ಸಾಧ್ಯವಾಗದ ಬಿಜೆಪಿ ಸರ್ಕಾರ ಇರುವ ಅಣೆಕಟ್ಟೆ ಉಳಿಸಿಕೊಳ್ಳಲು ನಿರ್ಲಕ್ಷ ತೋರುತ್ತಿದೆ. ಪ್ರಾಯೋಗಿಕ ಪರೀಕ್ಷೆ ಮಾಡಲೇಬೇಕಾದರೆ ಬೇರೆ ಕಡೆ ಮಾಡಲಿ. ಅಣೆಕಟ್ಟೆಯ ಆಯಸ್ಸು 120 ವರ್ಷ. ಈಗಾಗಲೇ 92 ವರ್ಷ ಆಗಿದೆ. ಹೀಗಿರುವಾಗ ಪ್ರಾಯೋಗಿಕ ಪರೀಕ್ಷೆ ಮಾಡಬೇಕೇ? ಗಣಿಗಾರಿಕೆ ಮಾಡಲು ಬೇಕಾದಷ್ಟು ಜಾಗವಿದೆ. ಕಾಂಗ್ರೆಸ್ ಮುಖಂಡರು ಗಣಿಗಾರಿಕೆ ಮಾಡುತ್ತಿದ್ದರೂ ಅಷ್ಟೇ. ನಮಗೆ ಡ್ಯಾಂ ಸುರಕ್ಷಿತವಾಗಿ ರುವುದೇ ಮುಖ್ಯ. ಗಣಿಗಾರಿಕೆಗೆ ಜಿಲ್ಲಾಡಳಿಯ ಅವಕಾಶ ನೀಡ ಬಾರದು’ ಎಂದು ಒತ್ತಾಯಿ ಸಿದರು.

‘ಗಣಿ ಮಾಲೀಕರ ಕಡೆ ಯವರು ಪರೀಕ್ಷಾ ಸ್ಫೋಟಕ್ಕಾಗಿ ಜಾರ್ಖಂಡ್ನಿಂದ ಬಂದಿರಬಹುದು ಅಥವಾ ವಿಜ್ಞಾನಿಗಳನ್ನು ಕರೆಸಿ ಕೊಂಡಿರಬಹುದು. ಈ ಮಾಹಿತಿ ಅಲ್ಲಿನ ಸರ್ಕಾರಕ್ಕೆ ತಿಳಿದಿದೆಯೇ?ಆ ರಾಜ್ಯದ ಸಂಘ ಸಂಸ್ಥೆಯೊಂದರ ಸದಸ್ಯರನ್ನು ವಿಜ್ಞಾನಿಗಳೆಂದು ಕರೆಸಿದ್ದಾರೆ. ರಾಜ್ಯದ ಕಂದಾಯ ಇಲಾಖೆ ಅಧೀನದಲ್ಲಿರುವ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವೇ ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯವಿದೆ ಎಂದು ವರದಿ ನೀಡಿದೆ ಎಂದರು.

ಕನಗನಮರಡಿ; ಅಕ್ರಮ ಗಣಿಗಾರಿಕೆ ನಿಲ್ಲಲಿ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ಎಚ್.ಎನ್.ರವೀಂದ್ರ ಮಾತನಾಡಿ, ಪರೀಕ್ಷಾರ್ಥ ಸ್ಫೋಟದಿಂದ ಅನಾಹುತವಾದರೆ 32 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಸಿಗುವುದಿಲ್ಲ. ಪಾಂಡವಪುರ ತಾಲ್ಲೂಕಿನ ಕನಗನಮರಡಿ ಗ್ರಾಮದ ಸಮೀಪ ನಡೆಯುತ್ತಿರುವ ಗಣಿಗಾರಿಕೆ ನಿಲ್ಲಿಸುವಂತೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗಿದೆ. ಇದು ವರೆಗೂ ಸ್ಥಳ ಪರಿಶೀಲನೆ ನಡೆಸದ ಜಿಲ್ಲಾಧಿ ಕಾರಿ ಪರೀಕ್ಷಾ ಸ್ಫೋಟಕ್ಕೆ ಆಸಕ್ತಿ ತೋರಿಸು ತ್ತಿರುವುದು ಸರಿಯಲ್ಲ ಎಂದು ಅವರು ಸಮಾಧಾನ ವ್ಯಕ್ತಪಡಿಸಿದರು.

ಮುಖಂಡರಾದಸೋಮು ಸ್ವರ್ಣ ಸಂದ್ರ, ರಾಮಲಿಂಗಯ್ಯ, ಸಂಪಳ್ಳಿ ಉಮೇಶ್, ಆನಂದ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.