ಶನಿವಾರ, ಏಪ್ರಿಲ್ 1, 2023
23 °C

‘ರೈತಸಂಘದ ಕಾರ್ಯಕರ್ತರಲ್ಲಿ ಒಗ್ಗಟ್ಟಿರಲಿ’:ಅಣ್ಣೂರು ಮಹೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮದ್ದೂರು: ರೈತ ಸಂಘದ ಕಾರ್ಯಕರ್ತರು ಮತ್ತು ಪ್ರಗತಿಪರ ಚಿಂತಕರು ಒಗ್ಗಟ್ಟಾಗದಿದ್ದರೆ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಮುಖಂಡ ಅಣ್ಣೂರು ಮಹೇಂದ್ರ ಹೇಳಿದರು.

ತಾಲ್ಲೂಕಿನ ಬೆಸಗರಹಳ್ಳಿಯ ಬಸ್ ನಿಲ್ದಾಣದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಗುರುವಾರ ಆಯೋಜಿಸಿದ್ದ ರೈತನಾಯ ಕರಾದ ದಿ.ಕೆ.ಎಸ್. ಪುಟ್ಟಣ್ಣಯ್ಯ ಮತ್ತು ಕೋಣಸಾಲೆ ನರಸರಾಜು ಅವರ ಸ್ಮರಣೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತ ನಾಯಕರ ಹೆಸರಿನಲ್ಲಿ ಸರ್ವರೂ ಒಗ್ಗಟ್ಟಾಗಬೇಕಾದ ಅಗತ್ಯ ಇದೆ. ಕೆ.ಎಸ್‌.ಪುಟ್ಟಣ್ಣಯ್ಯ ಮತ್ತು ಕೋಣಸಾಲೆ ನರಸರಾಜು ಅವರ ನಿಧನದ ಬಳಿಕ ರೈತ ಸಂಘಟನೆಯ ಬಲ ಕುಸಿಯುತ್ತಿದೆ. ಸರ್ಕಾರಿ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಂಘಟನೆ ಗಳ ಭಯ ಇಲ್ಲ. ಮನಸೋ ಇಚ್ಛೆ ಆಡಳಿತ ಮಾಡುತ್ತಿದ್ದಾರೆ. ರೈತನ ಬದುಕು ದಿನದಿಂದ ದಿನಕ್ಕೆ ಹೀನಾ ಯವಾಗುತ್ತಿದೆ. ರೈತರ ಸಮಸ್ಯೆಗಳು ಬಗೆಹರಿಯಬೇಕಾದರೆ ನಾವು ಸಿದ್ಧಾಂತ ಮತ್ತು ಬದ್ಧತೆಯಿಂದ ಹೋರಾಟ ಮಾಡಬೇಕು ಎಂದರು.

ರೈತ ಸಂಘದ ಹಿರಿಯ ಮುಖಂಡ ಕೀಳಘಟ್ಟ ನಂಜುಂಡಯ್ಯ ಮಾತನಾಡಿ, ಕೆ.ಎಸ್.ಪುಟ್ಟಣ್ಣಯ್ಯ, ಕೋಣಸಾಲೆ ನರಸರಾಜು, ವಳಗೆರೆಹಳ್ಳಿ ಅಶೋಕ್ ಅವರ ಸಂಘಟನಾ ಕೌಶಲಗಳನ್ನು ಯುವ ಹೋರಾಟಗಾರರು ಅಳವಡಿಸಿ ಕೊಳ್ಳಬೇಕು. ಸಂಘಟನೆಯ ಮೇಲೆ ಗೌರವ ಬೆಳೆಸಿಕೊಳ್ಳಬೇಕು ಎಂದರು.

ರೈತ ಸಂಘದ ಹಿರಿಯ ಹೋರಾಟ ಗಾರರನ್ನು ಅಭಿನಂದಿಸಲಾಯಿತು. ರೈತ ಸಂಘದ ನಾಮಫಲಕಕ್ಕೆ ಪೂಜೆ ಸಲ್ಲಿಸಲಾಯಿತು.

ರೈತ ಸಂಘದ ಮುಖಂಡರಾದ ಪಣ್ಣೆದೊಡ್ಡಿ ವೆಂಕಟೇಶ, ರಮೇಶ, ಸೊ.ಸಿ.ಪ್ರಕಾಶ, ಗುಡಿ ದೊಡ್ಡಿ ಶಿವಲಿಂಗಯ್ಯ, ನಾರಾಯಣ್, ಬೊಪ್ಪ ಸಮುದ್ರ ಮಲ್ಲೇಶ, ಹೊಸಹಳ್ಳಿ ಸಿದ್ದರಾಜು, ವಿಜಿಕುಮಾರ್, ಮಡೇ ನಹಳ್ಳಿ ಮುತ್ತುರಾಜು, ಕರಡಕೆರೆ ಶಿವು, ರಾಮಣ್ಣ, ಡಿ.ಎ.ಕೆರೆ ಚನ್ನಪ್ಪ, ಡಿಎಸ್ಎಸ್ ಮುಖಂಡ ಬಿ.ಎಂ.ಸತ್ಯ, ಧೀರ್ ಕುಮಾರ್, ಪ್ರಭುಲಿಂಗ, ಮರ ಲಿಂಗ, ಅರಗಿನಮೇಳೆ ರಾಮೇಗೌಡ, ಹುರುಗಲವಾಡಿ ಉಮೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು