ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಾಭಿಷೇಕ: ವೈರಮುಡಿ ಜಾತ್ರೆ ಮುಕ್ತಾಯ, ಮೇಲುಕೋಟೆಯಲ್ಲಿ ಸಂಭ್ರಮ

Last Updated 30 ಮಾರ್ಚ್ 2021, 3:05 IST
ಅಕ್ಷರ ಗಾತ್ರ

ಮೇಲುಕೋಟೆ: ಚೆಲುವನಾರಾಯಣ ಸ್ವಾಮಿಗೆ ಸೋಮವಾರ ಸಂಜೆ ಪಟ್ಟಾಭಿಷೇಕ ಮಹೋತ್ಸವ ನೆರವೇ ರುವುದರೊಂದಿಗೆ ವೈರಮುಡಿ ಬ್ರಹ್ಮೋತ್ಸವ ಸಂಪನ್ನಗೊಂಡಿತು. ಜಾತ್ರಾಮಹೋತ್ಸವದ ಪ್ರಧಾನ ದಿನವಾದ ಸ್ವಾಮಿ ಜಯಂತಿಯ ಮೀನ ಹಸ್ತನಕ್ಷತ್ರದ ಶುಭದಿನದ ಪ್ರಯುಕ್ತ ಪಂಚಕಲ್ಯಾಣಿಯಲ್ಲಿ ಅವಭೃತ-ತೀರ್ಥಸ್ನಾನ ಮಹೋತ್ಸವ ನೆರವೇರಿತು.

ಚೆಲುವನಾರಾಯಣಸ್ವಾಮಿ ಬ್ರಹ್ಮಲೋಕದಿಂದ ಭೂಲೋಕಕ್ಕೆ ಅವಿರ್ಭವಿಸಿದ ದಿನವಾದ ಮೀನ ಮಾಸದ ಹಸ್ತನಕ್ಷತ್ರ ಹಿಂದಿನ ಎಂಟು ದಿನ ವೈರಮುಡಿ ಜಾತ್ರೆ ನಡೆಯುತ್ತಾ ಬಂದಿದೆ. ನವಾಹ ಉತ್ಸವದ ಕೊನೆ, 9ನೇ ತಿರುನಾಳ್ ಅವಭೃತ ಅಂಗವಾಗಿ ಬೆಳಿಗ್ಗೆ ಹತ್ತು ಗಂಟೆಯವೇಳೆಗೆ ರಾಜಮುಡಿ ಧರಿಸಿದ ಚೆಲುವನಾರಾಯಣಸ್ವಾಮಿಯ ಉತ್ಸವವನ್ನು ಗಜೇಂದ್ರವರದನಸನ್ನಿಧಿಗೆ ನೆರವೇರಿಸಲಾಯಿತು. ಅಲ್ಲಿ ಬೆಳ್ಳಿಯ ಸ್ನಪನಶೆಲ್ವರ್‌ಗೆ ವೇದಮಂತ್ರಗಳೊಂದಿಗೆ ಅಭಿಷೇಕ ನೆರವೇರಿಸಿ ತೀರ್ಥಸ್ನಾನ ನೆರವೇರಿಸಲಾಯಿತು.

ಸಂಜೆ ಕಲ್ಯಾಣಿ ತೀರದಲ್ಲಿರುವ ಪರಕಾಲಮಠದಲ್ಲಿ ಹೋಮಾದಿ ಕಾರ್ಯಕ್ರಮಗಳು ಮುಕ್ತಾಯವಾದ ನಂತರ ಚೆಲುವನಾರಾಯಣಸ್ವಾಮಿ ಪಟ್ಟಾಭಿಷೇಕ ಮಹೋತ್ಸವ ನೆರ ವೇರಿತು. ಈ ವೇಳೆ ರಾಜಗುರು ಮೈಸೂರು ಅಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಶ್ರೀಗಳು ಭಾಗವಹಿಸಿದ್ದರು.

ನಂತರ ಸ್ವಾಮಿಗೆ ಪುಷ್ಪಮಂಟ ಪಾರೋಹಣ ನೆರವೇರಿತು. ಈ ವೇಳೆ ದೇವಾಲಯದಲ್ಲಿ ಪಡಿಮಾಲೆ ನಡೆದು ವೈರಮುಡಿ ಜಾತ್ರಾಮಹೋತ್ಸವದ ಯಶಸ್ಸಿನಲ್ಲಿ ಪ್ರಮುಖಪಾತ್ರವಹಿಸಿದ ನಾಲ್ಕೂ ಸ್ಥಾನೀಕರಿಗೆ ಮಾಲೆ ಮರ್ಯಾದೆ ಮಾಡಲಾಯಿತು.

ಮಂಗಳವಾರ ಮೂಲಮೂರ್ತಿಗೆ ಮಹಾಭಿಷೇಕ, ರಾತ್ರಿ ಕತ್ತಲುಪ್ರದಕ್ಷಿಣೆ, ಹನುಮಂತವಾಹನೋತ್ಸವ ನೆರ ವೇರಲಿದೆ ಬುಧವಾರ ಅನ್ನಕೋಟಿ ಉತ್ಸವ ನೆರವೇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT