ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಗ್ಗೇಕಾಯಿ ದುಬಾರಿ, ಬೀನ್ಸ್‌ ಬೆಲೆ ಇಳಿಕೆ

ಚಳಿಯಿಂದಾಗಿ ಶೀತಗಾಳಿ, ಮಾರುಟ್ಟೆಗೆ ಹರಿದು ಬರುತ್ತಿದೆ ತರಕಾರಿ
Published 28 ನವೆಂಬರ್ 2023, 15:23 IST
Last Updated 28 ನವೆಂಬರ್ 2023, 15:23 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಮಂಡ್ಯ: ಚಳಿಗಾಲ ಆರಂಭವಾಗಿದ್ದು ಉತ್ತಮ ಗುಣಮಟ್ಟದ ತರಕಾರಿ ಮಾರುಕಟ್ಟೆಗೆ ಹರಿದು ಬರುತ್ತಿದೆ. ನುಗ್ಗೇಕಾಯಿ ಹೊರತುಪಡಿಸಿ ಮಿಕ್ಕೆಲ್ಲಾ ತರಕಾರಿ ಬೆಲೆ ನಿಯಂತ್ರಣದಲ್ಲಿದೆ.

ಮದುವೆ ಸೇರಿದಂತೆ ಕಾರ್ತೀಕ ಮಾಸದ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುವ ಕಾರಣ ನುಗ್ಗೇಕಾಯಿ ಬೆಲೆ ಏರುಗತಿಯಲ್ಲಿ ಸಾಗುತ್ತಿದೆ. ಕಳೆದ ವಾರ ₹ 100ರಂತೆ ಮಾರಾಟವಾಗುತ್ತಿದ್ದ ಕೆ.ಜಿ ನುಗ್ಗೇಕಾಯಿ ಬೆಲೆ ಈ ವಾರ ₹ 120ಕ್ಕೆ ಮಾರಾಟವಾಗುತ್ತಿದೆ. ನಾಟಿ ಬೀನ್ಸ್‌ ಬೆಲೆ ಇಳಿಕೆಯಾಗಿದ್ದು ₹ 40ರಂತೆ ಮಾರಾಟವಾಗುತ್ತಿದೆ. ಬಹುತೇಕ ತರಕಾರಿಗಳ ಬೆಲೆ ₹ 40 ಇರುವುದು ವಿಶೇಷ.

ಟೊಮೆಟೊ ಬೆಲೆ ಕೂಡ ನಿಯಂತ್ರಣದಲ್ಲಿದ್ದು ಕೆ.ಜಿ ₹ 30ರಂತೆ ಮಾರಾಟವಾಗುತ್ತಿದೆ. ಕಳೆದ ವಾರ ಟೊಮೆಟೊ ಕೊರತೆ ಇದ್ದ ಕಾರಣ ಬೆಲೆ ₹ 50ರವರೆಗೂ ಮಾರಾಟವಾಗುತ್ತಿತ್ತು. ಹೀರೆಕಾಯಿ ಬೆಲೆಯೂ ಕೊಂಚ ಇಳಿಕೆಯಾಗಿದ್ದು ₹ 40ರಂತೆ ಮಾರಾಟವಾಗುತ್ತಿದೆ. ಸೊಪ್ಪುಗಳ ಬೆಲೆಯೂ ಇಳಿಕೆಯಾಗಿದ್ದು ಸಾಮಾನ್ಯರ ಕೈಗೆಟುಕುತ್ತಿವೆ.

ಈರುಳ್ಳಿ ಬೆಲೆಯಲ್ಲಿ ಕಳೆದ ವಾರ ಕೊಂಚ ವ್ಯತ್ಯಾಸದಿಂದ ಕೂಡಿತ್ತು. ಈರುಳ್ಳಿ ದಾಸ್ತಾನು ಇಲ್ಲದ ಕಾರಣ ಬೆಲೆ ಏರಿಕೆಯಾಗಲಿದೆ ಎಂಬ ಆತಂಕ ಇತ್ತು. ಹೀಗಾಗಿ ಬೆಲೆ ₹ 70ರವರೆಗೂ ಮಾರಾಟವಾಗುತ್ತಿತ್ತು. ಆದರೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿರುವ ಕಾರಣ ಬೆಲೆ ನಿಯಂತ್ರಣಕ್ಕೆ ಬಂದಿದೆ. ಉತ್ತಮ ಗುಣಮಟ್ಟದ ಈರುಳ್ಳಿ ₹ 50ಕ್ಕೆ ಮಾರಾಟವಾಗುತ್ತಿದೆ.

ಮಂಗಳೂರುಸೌತೆ, ಸಿಹಿಗುಂಬಳ, ಬೂದುಗುಂಬಳ, ಎಲೆಕೋಸು, ಬೆಂಡೆಕಾಯಿ ₹30, ಸಿಹಿಗೆಣಸು, ಮರಗೆಣಸು, ಸೌತೆಕಾಯಿ, ಆಲೂಗೆಡ್ಡೆ ₹40, ಬದನೆಕಾಯಿ, ಪಡವಲಕಾಯಿ, ಸೋರೆಕಾಯಿ, ಮೂಲಂಗಿ, ಹೂಕೋಸು, ಹಾಗಲಕಾಯಿ, ಸೀಮೆಬದನೆಕಾಯಿ ₹40ಕ್ಕೆ ಕೆ.ಜಿ ಮಾರಾಟವಾಗುತ್ತಿವೆ. ಅವರೆಕಾಯಿ, ತೊಗರಿಕಾಯಿ ₹50ಕ್ಕೆ ದೊರೆಯುತ್ತಿವೆ.

ಭಜಿ ಮೆಣಸಿನಕಾಯಿ, ಗೆಡ್ಡೆಕೋಸು, ದಪ್ಪಮೆಣಸಿನಕಾಯಿ, ಗೋರಿಕಾಯಿ, ಸುವರ್ಣಗೆಡ್ಡೆ, ತಗಣಿಕಾಯಿ, ನಾಟಿ ಬೀನ್ಸ್‌ ₹40, ಶುಂಠಿ ₹80, ಹಸಿಬಟಾಣಿ, ರಾಜ್‌ಈರುಳ್ಳಿ, ಫಾರಂಬೆಳ್ಳುಳ್ಳಿ ₹120 ರಂತೆ ಪ್ರತಿ ಕೆ.ಜಿಗೆ ಮಾರಾಟವಾಗುವೆ. ಒಂದು ನಿಂಬೆಹಣ್ಣು ₹5ಕ್ಕೆ ದೊರೆಯುತ್ತಿದೆ.

ಸೊಪ್ಪುಗಳ ಬೆಲೆಯೂ ನಿಯಂತ್ರಣದಲ್ಲಿದೆ, ನಾಟಿ ಕೊತ್ತಂಬರಿ ಸೊಪ್ಪು ಮಾತ್ರ ಪ್ರತಿ ಕಟ್ಟು ₹ 30ರವರೆಗೂ ಮಾರಾಟವಾಗುತ್ತಿದೆ. ಸಬ್ಬಸಿಗೆ ₹ 20ಕ್ಕೆ ದೊರೆಯುತ್ತಿದೆ. ಪಾಲಾಕ್‌, ದಂಟು, ಕರಿಬೇವು, ಪುದಿನಾ, ಕೀರೆ, ಕಿಲ್‌ಕೀರೆ ₹ 10, ಮೆಂತೆ ₹ 20, ಚಿಕ್ಕಿಸೊಪ್ಪು ₹ 15ಕ್ಕೆ ದೊರೆಯುತ್ತಿದೆ.

ಧಾರ್ಮಿಕ ಉತ್ಸವಗಳ ಅಂಗವಾಗಿ ಹೂವಿನ ಬೆಲೆಯಲ್ಲೂ ಕೊಂಚ ಏರಿಕೆಯುಂಟಾಗಿದೆ. ಕೆ.ಜಿ ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹ 50, ಸೇವಂತಿಗೆ ₹30, ಬಿಳಿ ಸೇವಂತಿ ₹70, ಬಟನ್ಸ್‌ ₹80, ಸಣ್ಣಗುಲಾಬಿ, ಕಲ್ಕತ್ತಾ ಮಲ್ಲಿಗೆ ₹100, ಸುಗಂಧರಾಜ ₹150, ಕಣಗಲೆ ₹160, ಮರಳೆ, ಕಾಕಡ ₹300, ಮಲ್ಲಿಗೆ ₹550, ಕನಕಾಂಬರ ₹600ರಂತೆ ಮಾರಾಟವಾಗುತ್ತಿವೆ.

ಮಾರು ಸೇವಂತಿಗೆ ₹ 40, ಕೆಂಪು ಚೆಂಡುಹೂ ಮತ್ತು ಹಳದಿ ಚೆಂಡು ಹೂ ₹ 30, ತುಳಸಿ, ಬಿಳಿಸೇವಂತಿಗೆ, ₹30, ಬಟನ್ಸ್‌ ₹40, ಗಣಗಲೆ ₹50, ಕಾಕಡ, ಮರಳೆ ₹60, ಕನಕಾಂಬರ ಮತ್ತು ಮಲ್ಲಿಗೆ ₹ 80ರಂತೆ ಮಾರಾಟವಾಗುತ್ತಿವೆ.
ಹಣ್ಣುಗಳಲ್ಲಿ ದಾಳಿಂಬೆ ₹200ಕ್ಕೆ ಕೆ.ಜಿ ಮಾರಾಟವಾಗುತ್ತಿದೆ. ಸ್ಥಳೀಯ ಸೇಬು ಕೆ.ಜಿ ₹ 100ರಂತೆ ದೊರೆಯುತ್ತಿದೆ. ಶಿಮ್ಲಾ, ಡೆಲ್ಲಿ ಸೇಬಿನ ₹ 160ರವರೆಗೂ ಮಾರಾಟವಾಗುತ್ತಿವೆ.

ಪಪ್ಪಾಯ, ಕಲ್ಲಂಗಡಿ ₹25, ಪಚ್ಚಬಾಳೆ, ಕರಬೂಜ ₹40, ಸೀಬೆ, ಅನಾನಸ್‌ ₹60, ಏಲಕ್ಕಿಬಾಳೆ ₹60, ಮೂಸಂಬಿ ₹80, ಕಂದ್ರಾಕ್ಷಿ ₹110, ಕಪ್ಪು ದ್ರಾಕ್ಷಿ, ಕಿವಿಹಣ್ಣು (ಬಾಕ್ಸ್‌) ₹120, ಡೆಲ್ಲಿ ಸೇಬು ₹190, ಕಿತ್ತಳೆ ₹110, ಶಿಮ್ಲಾ ಸೇಬು ₹220ರಂತೆ ಮಾರಾಟವಾಗುತ್ತಿವೆ.

ಹಣ್ಣು, ತರಕಾರಿ ದರ (₹ ಪ್ರತಿ ಕೆ.ಜಿ)

ನಾಟಿ ಬೀನ್ಸ್‌;40
ನುಗ್ಗೇಕಾಯಿ; 120
ಹಸಿರು ಮೆಣಸಿನಕಾಯಿ; 40
ಕ್ಯಾರೆಟ್‌;40
ಗೆಡ್ಡೆಕೋಸು; 40
ಬೆಂಡೆಕಾಯಿ; 30
ಟೊಮೆಟೊ; 30
ಈರುಳ್ಳಿ; 50
ರಾಜ್‌ ಈರುಳ್ಳಿ;160
ಬೆಳ್ಳುಳ್ಳಿ; 160
ಶಿಮ್ಲಾ ಸೇಬು; 160
ಕಪ್ಪು ದ್ರಾಕ್ಷಿ; 120
ಆಸ್ಟ್ರೇಲಿಯಾ ಕಿತ್ತಳೆ;₹110
ಪಚ್ಚಬಾಳೆ; 40
ಏಲಕ್ಕಿಬಾಳೆ; 60
ದಾಳಿಂಬೆ; 200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT