ಮಂಗಳವಾರ, ಜೂನ್ 28, 2022
26 °C

ಜಮೀರ್‌ ಅಹಮ್ಮದ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಶಾಸಕ ಸುರೇಶ್‌ಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗಮಂಗಲ: ‘ಬಡ್ಡಿ ಗಿರಾಕಿ ಯಾರು, ಉಲ್ಟಾ ಗಿರಾಕಿ ಯಾರು, ಇವರು ಯಾರಿಂದ ಮೇಲೆ ಬಂದಿದ್ದಾರೆ ಎಂಬುದನ್ನು ಜಮೀರ್ ಅಹಮ್ಮದ್ ಹಿಂತಿರುಗಿ ನೋಡಿಕೊಳ್ಳಲಿ. ಅವರ ನಾಲಿಗೆ ಅವರ ಸಂಸ್ಕೃತಿಯನ್ನು ತೋರಿಸುತ್ತದೆ’ ಎಂದು ಶಾಸಕ ಸುರೇಶ್ ಗೌಡ ಹೇಳಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಮಾರಸ್ವಾಮಿ, ಯಾರನ್ನೋ ಮೆಚ್ಚಿಸಲು, ಒಂದು ಸಮುದಾಯವನ್ನು ಹಿಡಿತಕ್ಕೆ ತೆಗೆದುಕೊಳ್ಳುವುದಕ್ಕಾಗಿ, ನಮ್ಮ ವಿರೋಧಿಗಳನ್ನು ಮೆಚ್ಚಿಸುವ ಭರದಲ್ಲಿ ಜಮೀರ್ ಅಹಮ್ಮದ್ ಈ ರೀತಿ ಕ್ಷುಲ್ಲಕ ರಾಜಕಾರಣ ಮಾಡುತ್ತಾ ಹೇಳಿಕೆ ನೀಡುತ್ತಿರುತ್ತಾರೆ. ಅವರ ಯೋಗ್ಯತೆಗೆ ಜನರು ಕೊಟ್ಟ ಮತ ಮಾರಿಕೊಂಡವರು ಎಂದರು.

‘ರಾಮಮೂರ್ತಿ ಅವರಿಗೆ ಮತ ನೀಡಲು ಇವರು ಎಷ್ಟು ಹಣ ಪಡೆದುಕೊಂಡಿದ್ದಾರೆ. ಹಾಗಾದರೆ ಇವರು ಉಲ್ಟಾ ಗಿರಾಕಿ, ಪಲ್ಟಿ ಗಿರಾಕಿ ಅಲ್ವ. ಜಮೀರ್ ಅವರ ಯೋಗ್ಯತೆ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಇಂಥ ವರ ಮಾತಿಗೆ ಪ್ರತಿಕ್ರಿಯೆ ನೀಡ ಬಾರದು. ಅವರಿಗೆ ಆಡಿದ ಮಾತಿನ ಮೇಲೆ ನಿಗಾ ಇರುವುದಿಲ್ಲ. ಯಾವ ನಶೆಯಲ್ಲಿ ಮಾತನಾಡುತ್ತಾರೋ ತಿಳಿಯಲ್ಲ. ಜನರು ಇಂತಹ ಕ್ಷುಲ್ಲಕ ರಾಜಕಾರಣಿಗಳಿಗೆ ಬೆಲೆ ಕೊಡಬಾರದು’ ಎಂದರು.

‘ಎಚ್‌.ಡಿ.ಕುಮಾರಸ್ವಾಮಿ ಅವರು ನಿಮ್ಮಿಂದ ಕಲಿಯಬೇಕಾದ ಅವಶ್ಯಕತೆಯಿಲ್ಲ. ನಿಮಗೇನಾದರೂ ಮಾನವೀಯತೆ ಇದ್ದರೆ ದೇವೇ ಗೌಡರ ಕುಟುಂಬದ ಬಗ್ಗೆ ಮಾತ ನಾಡುವುದನ್ನು ನಿಲ್ಲಿಸಿ. ನಿನ್ನನ್ನು ನಾಯಕನನ್ನಾಗಿ ಮಾಡಿದವರಿಗೆ ನೀನು ಕೊಡುವ ಬೆಲೆ ಇದೇ. ನೀನೊಬ್ಬ ನಾಲಾಯಕ್’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು