ಮಂಡ್ಯ: ನಗರದಲ್ಲಿನ ಕೆಲವು ಸಾರ್ವಜನಿಕ ಉದ್ಯಾನಗಳು, ಸರ್ಕಾರದ ಮೈದಾನಗಳು ಖಾಸಗಿ ಶಾಲೆಗಳ ಆಟದ ಮೈದಾನಗಳಾಗಿವೆ. ಅದಕ್ಕಾ ಗಿಯೇ ಉದ್ಯಾನದ ಸುತ್ತ ಹಾಕಿದ್ದ ಬೇಲಿಯನ್ನು ಕೆಲವು ಕಡೆ ಕಿತ್ತಿ ಹಾಕಲಾಗಿದೆ.

ಜಿಲ್ಲಾಧಿಕಾರಿ ಕಚೇರಿ ಹಿಂಭಾಗ, ವಿದ್ಯಾ ನಗರದ ಉದ್ಯಾನ ಹಾಗೂ ಅಶೋಕ ನಗರದ ಬಾಲಭವನ ಸೇರಿದಂತೆ ಮುಂತಾದ ಉದ್ಯಾನದ ಜಾಗಗಳು ಆಟಕ್ಕೆ ಸೀಮಿತವಾಗಿವೆ. ಇಲ್ಲಿ ನೋಡಲು ಒಂದೇ ಒಂದು ಹೂ ಗಿಡವೂ ಸಿಗುವುದಿಲ್ಲ.

ನಗರದ ಪ್ರಮುಖ ಪ್ರದೇಶ ಗಳಲ್ಲಿರುವ ಉದ್ಯಾನಗಳಲ್ಲಿ ಫುಟ್‌ಪಾತ್ ನಿರ್ಮಿಸಲಾಗಿದೆ. ಸುತ್ತಲೂ ತಂತಿ ಬೇಲಿ ಹಾಕಲಾಗಿದೆ. ಆದರೆ ಹುಲ್ಲುಗಾವಲು ಬೆಳೆಸಲಿಕ್ಕಾಗಲಿ, ಸಸಿಗಳನ್ನು ನೆಡುವ ಗೋಜಿಗಾಗಲಿ ನಗರಸಸಭೆ ಹೋಗಿಲ್ಲ.

ಪ್ರತಿ ಶಾಲೆಯೂ ಕಡ್ಡಾಯವಾಗಿ ಆಟದ ಮೈದಾನವನ್ನು ಹೊಂದಿರಬೇಕು ಎಂದು ಶಾಲಾ ಆರಂಭಿಸುವವರಿಗೆ ನಿಯಮವೇ ಇದೆ. ಶಾಲೆ ಆರಂಭದ ಸಂದರ್ಭದಲ್ಲಿ, ಶಾಲೆಯನ್ನು ಇಲ್ಲಿ ತಾತ್ಕಾಲಿಕವಾಗಿ ತೆರೆಯಲಾಗಿದೆ.

ಮುಂದಿನ ವರ್ಷದಿಂದ ಮೈದಾನ ಒದಗಿಸಲಾಗುವುದು ಎಂದು ಶಾಲಾ ಆಡಳಿತ ಮಂಡಳಿಯವರು ಹೇಳು ತ್ತಾರೆ. ಮುಂದಿನ ವರ್ಷಗಳಲ್ಲಿ ಅಧಿಕಾರಿಗಳು `ಜಾಣ~ ಕುರುಡರಂತೆ ಮತ್ತೆ ಅದನ್ನು ಪರಿಶೀಲಿಸಲು ಹೋಗುವುದೇ ಇಲ್ಲ.

ಶಾಲೆಗಳ ಆಸು-ಪಾಸಿನಲ್ಲಿರುವ ಸಾರ್ವಜನಿಕ ಉದ್ಯಾನಗಳನ್ನೇ ಇವರು, ಆಟದ ಮೈದಾನವಾಗಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಇಲ್ಲಿಯೇ ತಂದು ಆಟಕ್ಕೆ ಬಿಡುತ್ತಾರೆ. ಇದರಿಂದ ಅಕ್ಕ-ಪಕ್ಕದ ನಿವಾಸಿಗಳಿಗೂ ತೊಂದರೆ ಯಾಗುತ್ತಿದೆ.

ಜಿಲ್ಲಾಧಿಕಾರಿ ಕಚೇರಿಯ ಹಿಂದಿರುವ ಖಾಸಗಿ ಶಾಲೆಯೊಂದರ ವಿದ್ಯಾರ್ಥಿ ಗಳು ಕಚೇರಿಗೆ ಹೊಂದಿಕೊಂಡಿರುವ ಉದ್ಯಾನವನ್ನೇ ಆಟದ ಮೈದಾನ ವಾಗಿಸಿಕೊಂಡಿದ್ದಾರೆ. ಮಕ್ಕಳೆಂದ ಮೇಲೆ ಕೂಗಾಟ ಇದ್ದದ್ದೆ. ಇದರ ಸುತ್ತಮುತ್ತಲ ಸರ್ಕಾರಿ ಕಚೇರಿಗಳಿವೆ. ಅವರಿಗೂ ತೊಂದರೆಯಾಗುತ್ತದೆ.

ಸುಭಾಷ ನಗರದ ಉದ್ಯಾನವೂ ಶಾಲೆ ವಿದ್ಯಾರ್ಥಿಗಳ ಆಟದ ಮೈದಾನವಾಗಿದ್ದು, ಸುತ್ತ- ಮುತ್ತಲಿನ ್ಲಲಿರುವ ಮನೆಗಳ ನಿವಾಸಿಗಳಿಗೂ ತೊಂದರೆಯಾಗುತ್ತಿದೆ. ಬಾಲ ಭವನದ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ.

ಉದ್ಯಾನಗಳ ಪ್ರವೇಶಕ್ಕೆ ವಿದ್ಯಾರ್ಥಿಗಳು ಸರಳ ಮಾರ್ಗ ಕಂಡುಕೊಳ್ಳಲು, ಉದ್ಯಾನ ಸುತ್ತಲು ಹಾಕಲಾಗಿರುವ ಬೇಲಿಯನ್ನೇ ಕಿತ್ತು ಹಾಕಿದ್ದಾರೆ. ಇದನ್ನು ಪರಿಶೀಲಿಸುವ ಗೋಜಿಗೆ ನಗರಸಭೆಯ ಅಧಿಕಾರಿಗಳು ಹೋಗುತ್ತಿಲ್ಲ. ಪರಿಣಾಮ ಇವುಗಳನ್ನು ಸ್ವಂತ ಆಸ್ತಿ ಎಂಬಂತೆ ಬಳಸಿಕೊಳ್ಳಲಾಗುತ್ತಿದೆ.

ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಆಟದ ಮೈದಾನ ಒದಗಿಸಿಕೊಡಬೇಕು. ಉದ್ಯಾನಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಉದ್ಯಾನಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸುತ್ತಾರೆ ಚಾಮುಂಡೇಶ್ವರಿ ನಗರದ ಬೈರೇಗೌಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.