ಮದ್ದೂರು: ರೈತರ ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ಈ ತಿಂಗಳ 30 ಅಂತಿಮ ದಿನಾಂಕವಾಗಿದೆ. ಈ ದಿನಾಂಕದೊಳಗೆ ಅಕ್ರಮ ಪಂಪ್‌ಸೆಟ್ ಹೊಂದಿರುವ ಎಲ್ಲಾ ರೈತರು ಸಕ್ರಮಗೊಳಿಸಿ ಕೊಳ್ಳಲು ಮುಂದಾಗಬೇಕು ಎಂದು ಸೆಸ್ಕ್ ಸಹಾ ಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ತಿಳಿಸಿದರು.

ಶನಿವಾರ ಸಂಜೆ ಸೆಸ್ಕ್ ಕಚೇರಿ ಯಲ್ಲಿ ಏರ್ಪಡಿಸಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಅ.1ರ ನಂತರ ಅಕ್ರಮ ಪಂಪ್‌ಸೆಟ್ ಹೊಂದಿರುವವರ ಮೇಲೆ ವಿದ್ಯುತ್ ಕಳ್ಳತನದ ಆರೋಪದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿ ಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ತಾಲ್ಲೂಕಿನಾದ್ಯಂತ ವಿದ್ಯುತ್ ಬಾಕಿ ವಸೂಲಾತಿ ಆಂದೋಲನ ಆರಂಭಿಸಿದ್ದು, ಬಾಕಿ ಉಳಿಸಿಕೊಂಡಿ ರುವ ಗ್ರಾಹಕರು ಕೂಡಲೇ ಬಿಲ್ ಪಾವತಿಗೆ ಮುಂದಾಗಬೇಕು. ಕೆಲವು ಗ್ರಾಮಗಳಲ್ಲಿ ಬಿಲ್ ಪಾವತಿಗೆ ಮುಂದಾದ ಗ್ರಾಹಕರನ್ನು ಕೆಲವರು ತಡೆದು ಗಲಾಟೆ ಮಾಡಿದ್ದಾರೆ. ಅಂತವರ ಮೇಲೆ ಇನ್ನು ಮುಂದೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದರು.

ಬೆಸಗರಹಳ್ಳಿ, ಪಣ್ಣೇದೊಡ್ಡಿ, ಮಹರ‌್ನವಮಿದೊಡ್ಡಿ ಗ್ರಾಮಗಳಲ್ಲಿ ನಿರಂತರ ವಿದ್ಯುತ್ ಯೋಜನೆ ಜಾರಿಯಿದೆ. ಆದರೆ ಹಲವು ಗ್ರಾಹಕರು ಇಂದಿಗೂ ವಿದ್ಯುತ್ ಬಿಲ್ ಪಾವತಿಸಿಲ್ಲ. ಕೂಡಲೇ ಎಲ್ಲಾ ಗ್ರಾಹಕರು ವಿದ್ಯುತ್ ಬಿಲ್ ಪಾವತಿಗೆ ಮುಂದಾಗಬೇಕು. ಇಲ್ಲದಿದ್ದರೆ ನಿರಂತರ ವಿದ್ಯುತ್ ಯೋಜನೆ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದ ಅವರು, ಗಂಗಾ ಕಲ್ಯಾಣ ಯೋಜನೆ ಕಾಮಗಾರಿ ಸೇರಿದಂತೆ ಹಳೇ ಕಬ್ಬಿಣದ ಕಂಬಗಳ ತೆರವು ಕಾರ್ಯ ಆರಂಭಗೊಂಡಿದೆ ಎಂದರು.

ಕುಡಿಯುವ ನೀರಿಗೆ ಪ್ರತ್ಯೇಕ ಟ್ರಾನ್ಸ್‌ಫಾರ‌್ಮರ್ ಅಳವಡಿಸಲಾಗು ತ್ತಿದ್ದು, ಲೈನ್‌ಮೆನ್‌ಗಳ ಕೊರತೆ ಯನ್ನು ನಿವಾರಿಸಲಾಗಿದೆ. ಗ್ರಾಹಕರು ಯಾವುದೇ ಸಂದರ್ಭದಲ್ಲಿ ನಮ್ಮ ಸಿಬ್ಬಂದಿಯ ಸೇವೆ ಪಡೆಯಬಹುದಾಗಿದ್ದು, ಸೇವೆ ಸಮರ್ಪಕವಾ ಗಿರದಿದ್ದರೆ ದೂರು ನೀಡಬಹುದಾಗಿದೆ ಎಂದು ತಿಳಿಸಿದರು. ಹಿರಿಯ ಸಹಾಯಕ ಜೋಸೆಫ್ ಸೇರಿದಂತೆ ಹಲವರು ಸಭೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.