ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

173 ಮಂದಿಗೆ ಕೋವಿಡ್‌, 6 ಸಾವು

Last Updated 25 ಅಕ್ಟೋಬರ್ 2020, 8:07 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲೆಯಲ್ಲಿ ಹೊಸದಾಗಿ 173 ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 46,565 ಕ್ಕೆ ಏರಿಕೆಯಾಗಿದೆ.

ಕೋವಿಡ್‌ನಿಂದ ಗುಣಮು ಖರಾಗುತ್ತಿರುವವರ ಸಂಖ್ಯೆ ಕಳೆದ ಒಂದು ವಾರದಿಂದ ಏರಿಕೆಯಾಗಿದ್ದು, ಒಂದೇ ದಿನ 830 ಮಂದಿ ಸೋಂಕು ಮುಕ್ತರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2,658ಕ್ಕೆ ಇಳಿಕೆಯಾಗಿದೆ.

1,373 ಮಂದಿ ಮನೆಯಲ್ಲೇ ಐಸೊಲೇಷನ್‌ ಆಗಿದ್ದಾರೆ. ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ 208 ಮಂದಿ, ಖಾಸಗಿ ಆಸ್ಪತ್ರೆಗಳಲ್ಲಿ 638
ಮಂದಿ, ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ 58, ಖಾಸಗಿ ಕೋವಿಡ್‌ ಚಿಕಿತ್ಸಾ ಕೇಂದ್ರದಲ್ಲಿ 94, ಕೋವಿಡ್‌ಕೇರ್‌ ಕೇಂದ್ರದಲ್ಲಿ 188, ಖಾಸಗಿ ಕೋವಿಡ್‌ ಕೇರ್‌ ಕೇಂದ್ರದಲ್ಲಿ 99 ಮಂದಿ ಆರೈಕೆ ಪಡೆಯುತ್ತಿದ್ದಾರೆ.

ರೋಗಿಗಳಸಂಪರ್ಕಕ್ಕೆ ಬಂದ 106 ಮಂದಿ, ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣದಿಂದ (ಐಎಲ್‌ಐ) ಬಳಲುತ್ತಿದ್ದ 41 ಮಂದಿ, ತೀವ್ರ ಉಸಿರಾಟ ಸಮಸ್ಯೆಯಿಂದ (ಎಸ್‌ಎಆರ್‌ಐ) ಬಳಲುತ್ತಿದ್ದ 7 ಹಾಗೂ ಇತರ 19 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆರು ಸಾವು: ಮತ್ತೆ ಆರು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ 945 ಕ್ಕೆ ಹೆಚ್ಚಿದೆ. 63, 68, 60, 84 ವರ್ಷದ ಪುರುಷರು ಹಾಗೂ 79, 80
ವರ್ಷದ ಮಹಿಳೆಯರು ವಿವಿಧ ದಿನಗಳಲ್ಲಿ ಸಾವಿಗೀಡಾಗಿರುವುದಾಗಿ ಆರೋಗ್ಯ ಇಲಾಖೆಯ ಶನಿವಾರದ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT