ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

98 ಗ್ರಾಮ ಸೇರಿ ಸಾಲಿಗ್ರಾಮ ತಾಲ್ಲೂಕು

ಹೊಸ ತಾಲ್ಲೂಕು ಅಸ್ತಿತ್ವಕ್ಕೆ: ರಾಜ್ಯ ಕಂದಾಯ ಇಲಾಖೆಯಿಂದ ಪ್ರಕಟಣೆ
Last Updated 3 ಜನವರಿ 2021, 2:55 IST
ಅಕ್ಷರ ಗಾತ್ರ

ಸಾಲಿಗ್ರಾಮ(ಮೈಸೂರು): ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಸಾಲಿಗ್ರಾಮ ತಾಲ್ಲೂಕಿಗೆ 98 ಗ್ರಾಮಗಳನ್ನು ಸೇರ್ಪಡೆ ಮಾಡಿ ರಾಜ್ಯ ಕಂದಾಯ ಇಲಾಖೆಆದೇಶ ಹೊರಡಿಸಿದೆ.

ಮಿರ್ಲೆ, ಸಾಲಿಗ್ರಾಮ ಮತ್ತು ಚುಂಚನಕಟ್ಟೆ 3 ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಹೊಸ ತಾಲ್ಲೂಕಿಗೆ ಸೇರ್ಪಡೆ ಮಾಡುವ ಜತೆಗೆ ಹೊಸ ಅಗ್ರಹಾರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳನ್ನು ಸಾಲಿಗ್ರಾಮ ತಾಲ್ಲೂಕಿಗೆ ಸೇರಿಸಲಾಗಿದೆ. ಈ ಮೊದಲು ಕೆ.ಆರ್‌.ನಗರ ತಾಲ್ಲೂಕು ವ್ಯಾಪ್ತಿಯಲ್ಲಿದ್ದವು.

ಸಾಲಿಗ್ರಾಮ ಹೋಬಳಿ ವ್ಯಾಪ್ತಿಗೆ ಹೊಸದಾಗಿ 29 ಗ್ರಾಮಗಳು, ಚುಂಚನಕಟ್ಟೆ ಹೋಬಳಿ ವ್ಯಾಪ್ತಿಗೆ 34 ಗ್ರಾಮಗಳು ಹಾಗೂ ಮಿರ್ಲೆ ಹೋಬಳಿ ವ್ಯಾಪ್ತಿಗೆ 35 ಗ್ರಾಮಗಳನ್ನು ಸೇರಿಸಲಾಗಿದೆ.

ಸಾಲಿಗ್ರಾಮ ಹೋಬಳಿಯಲ್ಲಿ ಬಳ್ಳೂರು, ಬೈಲಾಪುರ, ಅಂಕನಹಳ್ಳಿ, ಮೂಡಲಬೀಡು, ಕಳ್ಳಿಮುದ್ದನಹಳ್ಳಿ, ರಾಂಪುರ, ಎಲಾದಹಳ್ಳಿ, ಕರ್ಪೂರವಳ್ಳಿ, ಮುಂಡೂರು, ದೊಡ್ಡಕೊಪ್ಪಲು, ಸಾಲುಕೊಪ್ಪಲು, ಬಸವರಾಜಪುರ, ಕುಲುಮೆಹೊಸೂರು, ಸೆಣಬಿನ ಕುಪ್ಪೆ, ಹೊನ್ನೇನಹಳ್ಳಿ, ದಡದಹಳ್ಳಿ, ಮಾದಾಪುರ, ಕೆಡಗ, ಹರದನಹಳ್ಳಿ, ಲಕ್ಕಿಕುಪ್ಪೆ, ಲಕ್ಕಿಕುಪ್ಪೆಕೊಪ್ಪಲು, ಶೀಗವಾಳು, ಕಳ್ಳಿಕೊಪ್ಪಲು, ಕಾಳಮ್ಮನಕೊಪ್ಪಲು, ಸುಬ್ಬೇಗೌಡನ ಕೊಪ್ಪಲು, ಬೆಟ್ಟಹಳ್ಳಿ, ಮಲುಗನಹಳ್ಳಿ, ಬೆಕರೆಹಳ್ಳದಕೊಪ್ಪಲು, ಪಶುಪತಿ, ಮಾವನೂರು, ಪಶುಪತಿಕೊಪ್ಪಲು, ಸರಗೂರು, ಹೆಬ್ಸೂರು, ಲಕ್ಕಿಕುಪ್ಪೆ, ಗುಮ್ಮನಹಳ್ಳಿ, ಬೇವಿನಹಳ್ಳಿ ಸೇರಿವೆ.

ಚುಂಚನಕಟ್ಟೆ ಹೋಬಳಿ ವ್ಯಾಪ್ತಿಯಲ್ಲಿ ಶ್ರೀರಾಮಪುರ, ಹೊಸಕೋಟೆ, ಹೊಸಕೋಟೆ ಕೊಪ್ಪಲು, ಕರ್ತಾಳು, ತಂದ್ರೆ, ಕೋಗಿಲೂರು, ಅಬ್ಬೂರು, ಚಿಬಕಳ್ಳಿ, ಬೆಣಗನಹಳ್ಳಿ, ಹಳಿಯೂರು, ಹಳಿಯೂರು ಬಡಾವಣೆ, ದೊಡ್ಡಕೊಪ್ಪಲು, ಸಾಲೇಕೊಪ್ಪಲು, ಜವರೇಗೌಡನ ಕೊಪ್ಪಲು, ಗೊಲ್ಲರಕೊಪ್ಪಲು, ಹಾಡ್ಯ, ಹಾಡ್ಯಹಂತ, ಸಕ್ಕರೆ, ಕಗ್ಗಳ, ಕುಪ್ಪೆ, ಚಿಕ್ಕ ಕೊಪ್ಪಲು, ಚುಂಚನಕಟ್ಟೆ, ಕುಪ್ಪೆಹಂತ, ಅಂಕನಹಳ್ಳಿ, ಅಂಕನಹಳ್ಳಿ ಕೊಪ್ಪಲು, ಸೋಮನಹಳ್ಳಿ, ಮಾಯಿಗೌಡನಹಳ್ಳಿ, ಹೊಸೂರು, ದಿಡ್ಡಹಳ್ಳಿ, ಹನಸೋಗೆ, ಹನಸೋಗೆ ಹಂತ, ಗುಡಗನಹಳ್ಳಿ, ಚನ್ನಂಗೆರೆ, ಕೊಳೂರು, ಬಂಡಹಳ್ಳಿ, ನಾಡಪ್ಪನಹಳ್ಳಿ, ದಮ್ಮನಹಳ್ಳಿ ಸೇರಿವೆ.

ಮಿರ್ಲೆ ಹೋಬಳಿಯ ಮೇಲೂರು, ಮಿರ್ಲೆ, ಕುಪ್ಪೆಬೋರೆ, ಮುದ ಗುಪ್ಪೆ, ಕುಪ್ಪಹಳ್ಳಿ, ದೇವಿತಂದ್ರೆ, ತಂದ್ರೆಕೊ ಪ್ಪಲು, ತಂದ್ರೆ ಅಂಕನಹಳ್ಳಿ, ಕಾಟ್ನಾಳ್, ಬಾಚಹಳ್ಳಿ, ಕರುಬಹಳ್ಳಿ, ಕೆಂಚನಹಳ್ಳಿ, ಸಂಕನಹಳ್ಳಿ, ಕೊಡಿಯಾಲ, ಹನುಮನಹಳ್ಳಿ, ಹುಲ್ಲೇ ಬೋರೆ ಕಾವಲ್, ಬೀಚನಹಳ್ಳಿ, ನಾಟನಹಳ್ಳಿ, ನರುಚನಹಳ್ಳಿ, ಶ್ಯಾಬಾಳು, ಹಳೇಮಿರ್ಲೆ, ಗೇರದಡ, ಮುಂಜನಹಳ್ಳಿ, ಬಸವನಪುರ, ಚಿಕ್ಕಭೇರ್ಯ, ಮಠದ ಕಾವಲ್, ಭೇರ್ಯ, ಸೋಮನಹಳ್ಳಿ, ಸಂಭ್ರವಳ್ಳಿ, ಗುಳುವಿನ ಅತ್ತಿಕುಪ್ಪೆ, ಉದಯಗಿರಿ,ಅರೆಕೆರೆ ಗ್ರಾಮಗಳು ನೂತನ ತಾಲ್ಲೂಕಿಗೆ ಸೇರ್ಪಡೆ ಗೊಂಡಿವೆ.

‘ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರ ಶ್ರಮದಿಂದ ಸಾಲಿಗ್ರಾಮ ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಇದು ಈ ಭಾಗದ ಜನತೆಗೆ ಸಂತಸ ತಂದಿದೆ’ ಎಂದು ಗ್ರಾಮ ಪಂಚಾಯಿತಿ ನೂತನ ಸದಸ್ಯೆ ಸುಧಾ ರೇವಣ್ಣ ಸಂತಸ ವ್ಯಕ್ತಪಡಿಸಿದರು.

‘ಮೂರು ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಒಳಗೊಂಡುಸಾಲಿಗ್ರಾಮ ಹೊಸ ತಾಲ್ಲೂಕು ಕೇಂದ್ರವಾಗಿ ಹೊರ ಹೊಮ್ಮಲು ಶಾಸಕರ ಶ್ರಮ ಅಧಿಕವಾಗಿದೆ’ ಎಂದು ಜೆಡಿಎಸ್ತಾಲ್ಲೂಕು ಘಟಕದ ಅಧ್ಯಕ್ಷ ಮೆಡಿಕಲ್ ರಾಜಣ್ಣ ಹೇಳಿದರು.

‘ಕೆ.ಆರ್.ನಗರ ತಾಲ್ಲೂಕಿನಿಂದ ಸಾಲಿಗ್ರಾಮವನ್ನು ಬೇರ್ಪಡಿಸಿ ಹೊಸ ತಾಲ್ಲೂಕು ಮಾಡುವಂತೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮನವಿ ಮಾಡಿದ ಫಲವೇ ಇಂದು ಹೊಸ ತಾಲ್ಲೂಕು ಪಡೆಯಲು ಸಾಧ್ಯವಾಗಿದೆ’ ಎಂದು ಶಾಸಕ ಸಾ.ರಾ.ಮಹೇಶ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸಾಲಿಗ್ರಾಮ ತಾಲ್ಲೂಕು ಕೇಂದ್ರ ಆಗಿರುವುದರಿಂದ ಮತ್ತಷ್ಟು ಅಭಿವೃದ್ಧಿ ಕಾಣಬಹುದು. ಈಗ ಗ್ರಾಮಗಳ ಸೇರ್ಪಡೆ ಮಾಡಿ ಸಂತಸ ತಂದಿದೆ’ ಎಂದು ಹಿರಿಯ ನಾಗರಿಕ ಸುರೇಶ್ ಜೈನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT