ಗುರುವಾರ , ಮೇ 6, 2021
22 °C
3 ಕ್ರಿಮಿನಲ್ ಪ್ರಕರಣ ದಾಖಲು

ಮೈಸೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ 13 ಮಂದಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಬೋಗಾದಿ– ಹಿನಕಲ್ ರಿಂಗ್‌ರಸ್ತೆಯಲ್ಲಿ ಸೋಮವಾರ ಸಂಜೆ ಪೊಲೀಸರ ಮೇಲೆ ನಡೆದ ಹಲ್ಲೆ ಹಾಗೂ ಪೊಲೀಸ್ ವಾಹನವನ್ನು ಧ್ವಂಸಗೊಳಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ 13 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ 3 ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇನ್ನಷ್ಟು ಮಂದಿಯ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಗಾಣಿಗರಹುಂಡಿಯ ವೆಂಕಟೇಶ್ (28), ರಘು (25), ಮಳವಳ್ಳಿ ತಾಲ್ಲೂಕಿನ ಚಿಕ್ಕೇಬಾಗಿಲು ಗ್ರಾಮದ ಮಧು (25), ವಿಜಯನಗರ 4ನೇ ಹಂತದ ವಿನಯ್ (38), ಮರಟಿಕ್ಯಾತನಹಳ್ಳಿಯ ದಂಡಪ್ಪ (35), ಬೋಗಾದಿಯ ಚಾಮುಂಡೇಶ್ವರಿ ಬೀದಿಯ ನಿವಾಸಿ ಸ್ವಾಮಿ (23), ಪಾಂಡವಪುರ ತಾಲ್ಲೂಕಿನ ಚಿನಕುರುಳಿ ಗ್ರಾಮದ ಅರುಣ್ (23), ದೊಡ್ಡಕೊಪ್ಪಲು ಗ್ರಾಮದ ನಿವಾಸಿ ವಸಂತ್ ಕುಮಾರ್ (30), ಕೂರ್ಗಳ್ಳಿಯ ಸೋಮಶೇಖರ್ (40), ದಾಸನಕೊಪ್ಪಲು ಗ್ರಾಮದ ಅಕ್ಷಯ್ (27), ಬೋಗಾದಿ ಬ್ಯಾಂಕ್ ಕಾಲೋನಿಯ ಶ್ರೀಕಾಂತ್ (35), ಕಾಮನಕೊಪ್ಪಲು ನಿವಾಸಿ ಮರಿಸ್ವಾಮಿ (32), ಅರಕಲಗೂಡು ತಾಲ್ಲೂಕಿನ ಹೊನ್ನೇನಹಳ್ಳಿ ನಿವಾಸಿ ಮೋಹನ್ (33) ಬಂಧಿತ ಆರೋಪಿಗಳು.

ವಿಡಿಯೊ ಆಧರಿಸಿ ತನಿಖೆ: ಘಟನಾ ಸಂದರ್ಭದಲ್ಲಿ ಪೊಲೀಸರು ತೆಗೆದ ವಿಡಿಯೊ ಆಧರಿಸಿ ಆರೋಪಿಗಳನ್ನು ಗುರುತಿಸಲಾಗಿದೆ. ಹಲ್ಲೆ ನಡೆಸಿದ, ವಾಹನವನ್ನು ಧ್ವಂಸಗೊಳಿಸಿದ ಪ್ರಮುಖ ಆರೋಪಿಗಳು ಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು