ಮಂಗಳವಾರ, ಮೇ 17, 2022
27 °C
ಉಪಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥನಾರಾಯಣ ಅಭಿಮತ

‘ಜನಸಂಖ್ಯೆಗೆ ಅನುಸಾರ ಪೊಲೀಸ್ ಠಾಣೆ, ಸಿಬ್ಬಂದಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್.ನಗರ: ‘ಜನಸಂಖ್ಯೆಗೆ ಅನುಗುಣವಾಗಿ ಗ್ರಾಮೀಣ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಹೆಚ್ಚಿಸಲು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ’ ಎಂದು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎಸ್.ಅಶ್ವತ್ಥನಾರಾಯಣ ಭರವಸೆ ನೀಡಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲವಾಗಲು ಅಗತ್ಯ ವಾಗಿದ್ದ ವಿದ್ಯಾರ್ಥಿನಿಲಯ, ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಗಳನ್ನು ಒದಗಿಸಿ ಕಾಲೇಜು ಪ್ರಾರಂಭ ಮಾಡಲಾಗಿದೆ’ ಎಂದು ತಿಳಿಸಿದರು.

‘ರಾಮಮಂದಿರ ನಿರ್ಮಾಣವಾಗ ಬೇಕು ಎನ್ನುವುದು ಪ್ರತಿ ಭಾರತೀಯರ ಭಾವನೆಯಾಗಿದೆ, ನಿರ್ಮಾಣದಲ್ಲಿ ತನ್ನದೇ ಆದ ಕಾಣಿಕೆ ತಲುಪಬೇಕು ಎನ್ನುವುದೂ ಪ್ರತಿಯೊಬ್ಬರ ಭಾವನೆ ಯಾಗಿದೆ’ ಎಂದು ಹೇಳಿದರು.

‘ಮೀಸಲಾತಿ ಪ್ರತಿಯೊಂದು ಜಾತಿ ಜನಾಂಗದ ಆಸೆ, ಅಪೇಕ್ಷೆ ಇರುತ್ತದೆ, ನಮ್ಮ ಜಾತಿಗೂ ಇನ್ನೂ ಹೆಚ್ಚಿನ ಮೀಸಲಾತಿ ದೊರೆಯಬೇಕು, ವರ್ಗೀಕರಣ ಆಗಬೇಕು, ಬೇರೆ ವರ್ಗಕ್ಕೆ ಹೋಗಬೇಕು ಎನ್ನುವು ಬಹಳಷ್ಟು ಅಪೇಕ್ಷೆಗಳು ಇರುತ್ತದೆ, ಈ ಎಲ್ಲ ಅಪೇಕ್ಷೆಗಳಿಗೆ ಸರ್ಕಾರ ನ್ಯಾಯಬದ್ಧವಾಗಿ, ಕಾನೂನಾತ್ಮಕವಾಗಿ, ವೈಜ್ಞಾನಿಕವಾಗಿ ಕಾನೂನಿನಲ್ಲಿರುವ ಅವಕಾಶಗಳು ಮಾತ್ರ ಮಾಡಲು ಸಾಧ್ಯವಾಗುತ್ತದೆ, ಯಾವುದು ಸೂಕ್ತವಾಗಿದೆ, ಯಾವುದು ನ್ಯಾಯ ಬದ್ಧವಾಗಿದೆ ಅದನ್ನು ಮಾತ್ರ ಮಾಡಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು