ಗುರುವಾರ , ನವೆಂಬರ್ 26, 2020
20 °C

ಮೈಸೂರು: ಕಾಡಾನೆ ದಾಳಿಗೆ ಆದಿವಾಸಿ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಬಂಕಹಳ್ಳಿ ಗ್ರಾಮದಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾಡಾನೆ ತುಳಿತಕ್ಕೆ ಯುವಕ ಮೃತಪಟ್ಟಿದ್ದಾನೆ.

ನಂಜನಗೂಡು ತಾಲೂಕಿನ ವೆಂಕಟಗಿರಿ ಕಾಲೊನಿ ಮತ್ತು ಡೋರನಕಟ್ಟೆ ಕಾಲೊನಿಯ ಮಧ್ಯ ರಸ್ತೆಯಲ್ಲಿ ಘಟನೆ ನಡೆದಿದೆ.

ವೆಂಕಟಗಿರಿ ಆದಿವಾಸಿ ಕಾಲೊನಿಯ ಕೆಂಪ ಮತ್ತು ಚಿಕ್ಕಮ್ಮ ಎಂಬುವರ ಪುತ್ರ ಗಣೇಶ (25)  ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಹೆಡಿಯಾಲ ಅರಣ್ಯ ವಿಭಾಗದ ಎಸಿಎಫ್ ರವಿಕುಮಾರ್ ಆರ್‌ಎಫ್‌ಒ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಕರಣ ದಾಖಲಾದ ಬಳಿಕ ಸರ್ಕಾರದಿಂದ ಪರಿಹಾರ ಕಲ್ಪಿಸಲಾಗುವುದು ಎಂದು ಅಧಿಕಾರಿಗಳ ಭರವಸೆ ನೀಡಿದರು.


ಮೃತ ಯುವಕ ಗಣೇಶ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.