ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಅನುಕೂಲಕ್ಕಾಗಿ ಕೃಷಿ ರಥ: ಜಿ.ಟಿ.ದೇವೇಗೌಡ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ
Last Updated 12 ಜುಲೈ 2021, 14:46 IST
ಅಕ್ಷರ ಗಾತ್ರ

ಮೈಸೂರು: ‘ಮನೆ ಬಾಗಿಲಿಗೆ ಬರುವ ಕೃಷಿ ರಥದ ಸದುಪಯೋಗ ಪಡೆದುಕೊಳ್ಳಿ’ ಎಂದು ಶಾಸಕ ಜಿ.ಟಿ.ದೇವೇಗೌಡ ರೈತರಿಗೆ ಕಿವಿಮಾತು ಹೇಳಿದರು.

ಸಮಗ್ರ ಕೃಷಿ ಅಭಿಯಾನದಡಿ ‘ಇಲಾಖೆಗಳ ನಡಿಗೆ, ರೈತರ ಮನೆ ಬಾಗಿಲಿಗೆ’ ಎಂಬ ಕೃಷಿ ರಥಕ್ಕೆ ಸೋಮವಾರ ಚಾಲನೆ ನೀಡಿದ ಶಾಸಕರು, ‘ಈ ಕೃಷಿ ರಥವು ತಮ್ಮ ಮನೆ ಬಾಗಿಲಿಗೆ ಬರಲಿದ್ದು, ರೈತರು ತಮಗೆ ಬೇಕಿರುವ ಸಲಹೆ ಪಡೆಯಬಹುದು’ ಎಂದರು.

ಬೀಜ, ಗೊಬ್ಬರ, ಮಣ್ಣಿನ ಪರೀಕ್ಷೆ ಬಗ್ಗೆಯೂ ಈ ರಥದ ಮೂಲಕ ಮಾಹಿತಿ ಪಡೆಯಬಹುದು ಎಂದು ಜಿ.ಟಿ.ದೇವೇಗೌಡ ತಿಳಿಸಿದರು.

ಕಾಮಗಾರಿಗೆ ಚಾಲನೆ: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಚಾಲನೆ ನೀಡಿದರು.

ಬೋಗಾದಿ ಗ್ರಾಮದ ಎಸ್‌ಬಿಎಂ ಬಡಾವಣೆ, ರವಿಶಂಕರ್‌ ಬಡಾವಣೆ, ಬಾಪೂಜಿ ಬಡಾವಣೆಗಳಲ್ಲಿ ₹ 1.30 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂಬರ್‌ 45ರಲ್ಲಿ ₹ 8 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೆ, ಇಲವಾಲ ಗ್ರಾಮದಲ್ಲಿ ₹ 3.25 ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ ಜಿ.ಟಿ.ದೇವೇಗೌಡ ಚಾಲನೆ ನೀಡಿದರು.

ಬೋಗಾದಿ ಚಂದ್ರಶೇಖರ್, ಜಯಕುಮಾರ್, ಆನಂದ್, ಸ್ವಾಮಿಗೌಡ, ಹೊನ್ನೇಗೌಡ, ನಾಗರಾಜು, ಪಾಲಿಕೆ ಸದಸ್ಯರಾದ ನಿರ್ಮಲ ಹರೀಶ್, ಶೇಖರ್, ಹಿನ್‌ಕಲ್ ರಾಜು, ಮಂಜು, ಪ್ರಕಾಶ್, ಉದಯ್, ವೆಂಕಟೇಶ್, ಗುರುಸ್ವಾಮಿ, ಸ್ವಾಮಿ, ಮಹೇಶ್, ನಾಗೇಂದ್ರ, ನಾರಾಯಣ್, ವಿಜಯನಗರ ಮಂಜು, ಇಲವಾಲ ಗಂಗಾಧರ್, ನಾಗರಾಜು, ಭೈರೇಗೌಡ, ರಮೇಶ್, ಸುಪ್ರೀತ್, ಸುರೇಶ್, ರವಿ, ಬಾಲಕೃಷ್ಣ, ತಹಶೀಲ್ದಾರ್ ರಕ್ಷಿತ್, ಎಇಇ ರಾಜು, ಇಒ ರಮೇಶ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT