ಬುಧವಾರ, ಜೂನ್ 29, 2022
26 °C

ಎಐಟಿಯುಸಿ ಕಾರ್ಯಕರ್ತರಿಂದ ಬೃಹತ್ ರ್ಯಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಎಐಟಿಯುಸಿ ಸಂಘಟನೆಯ 11ನೇ ರಾಜ್ಯ ಸಮ್ಮೇಳನದ ಅಂಗವಾಗಿ ನೂರಾರು ಕಾರ್ಯಕರ್ತರು ಭಾನುವಾರ ಬೃಹತ್ ರ್ಯಾಲಿ ನಡೆಸಿದರು.

ಪುರಭವನದಿಂದ ಆರಂಭವಾದ ರ್ಯಲಿ ಚಿಕ್ಕಗಡಿಯಾರ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಇರ್ವಿನ್ ರಸ್ತೆ , ಅಶೋಕ ರಸ್ತೆ ಮೂಲಕ ಪುರಭವನ ತಲುಪಿತು. ಕೆಂಪಂಗಿ ಹಾಗೂ ಕೆಂಪು ಸೀರೆಯುಟ್ಟ ನೂರಾರು ಕಾರ್ಯಕರ್ತರು ಕೆಂಬಾವುಟಗಳನ್ನಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಐಟಿಯುಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮರ್ ಜೀತ್ ಕೌರ್, ರಾಜ್ಯ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಭಾಗವಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.