ಹುಣಸೂರು: ತಾಲ್ಲೂಕಿನಲ್ಲಿ ಕೋವಿಡ್ ಇಳಿಮುಖವಾಗುತ್ತಿದೆ. ಮೇ ತಿಂಗಳಲ್ಲಿ ನಿತ್ಯವೂ ಸರಾಸರಿ 200ರ ಆಸುಪಾಸಿನಲ್ಲಿ ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದರು. ಜೂನ್ ಅಂತ್ಯಕ್ಕೆ ಈ ಸಂಖ್ಯೆ ಎರಡಂಕಿಗೆ ಕುಸಿದಿದೆ. ಈ ಕುಸಿತದ ಹಿಂದೆ ಅಂಗನವಾಡಿ–ಆಶಾ ಕಾರ್ಯಕರ್ತರ ಸೇವೆಯಿದೆ.

54 ಹಾಡಿಗಳನ್ನು ಹೊಂದಿರುವ ತಾಲ್ಲೂಕಿನಲ್ಲಿ ಅಂಗನವಾಡಿ ಕಾರ್ಯ ಕರ್ತರು ಗಿರಿಜನರಿಗೆ ಕೋವಿಡ್ ಲಸಿಕೆ ಜಾಗೃತಿ ಮತ್ತು ಮನ ಪರಿವರ್ತನೆಗಾಗಿ ಪಟ್ಟ ಪರಿಶ್ರಮ ಅನನ್ಯ.

‘ಕೋವಿಡ್ ಆರಂಭದಿಂದಲೂ ಜಾಗೃತಿ ಕಾರ್ಯದಲ್ಲಿ ತೊಡಗಿದ್ದೇನೆ. ತಾನು ಇದೇ ಸಮುದಾಯಕ್ಕೆ ಸೇರಿ ದ್ದರೂ, ಲಸಿಕೆ ಎಂದೊಡನೆ ಜಗಳಕ್ಕೆ ಬರುವರು. ಈ ಸಂಕಷ್ಟದಲ್ಲೂ 20 ಜನರಿಗೆ ಲಸಿಕೆ ಹಾಕಿಸಿದ ತೃಪ್ತಿ ಇದೆ’ ಎನ್ನುತ್ತಾರೆ ಬಿ.ಆರ್.ಕಾವಲ್ ಹಾಡಿ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ ಸಣ್ಣಮ್ಮ.

‘ಗಿರಿಜನರ ಸಹವಾಸವೇ ಬೇಡ. ಆರಂಭದಲ್ಲಿ ಲಸಿಕೆ ಕುರಿತಂತೆ ಹರ ಡಿದ ತಪ್ಪು ಮಾಹಿತಿಯಿಂದಾಗಿ ಎಷ್ಟೇ ತಿಳಿವಳಿಕೆ ಹೇಳಿದರೂ ಬದಲಾ ವಣೆಯಾಗುತ್ತಿಲ್ಲ’ ಎಂದುನೇರಳಕುಪ್ಪೆ ಎ, ಬಿ ಹಾಡಿಯ ಆಶಾ ಕಾರ್ಯಕರ್ತೆ ನೇತ್ರಾವತಿ ತಿಳಿಸಿ ದರು.

ತಗ್ಗಿದ ಸೋಂಕು: ತಾಲ್ಲೂಕು ಕೋವಿಡ್ ವಾರ್ ರೂಂ ಅಂಕಿ–ಅಂಶದ ಮಾಹಿತಿಯಂತೆ ಮೇ ಅಂತ್ಯದಲ್ಲಿ ನಿತ್ಯವೂ 100ಕ್ಕೂ ಹೆಚ್ಚು ಸೋಂಕಿತರು ಪತ್ತೆ ಆಗುತ್ತಿದ್ದರು. ಇದೀಗ ಈ ಸಂಖ್ಯೆ 50ರೊಳಕ್ಕೆ ಬಂದಿದೆ. ಏಪ್ರಿಲ್ನಿಂದ ಜೂನ್ 20ರವರೆಗೆ 6349 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ 5883 ಜನರು ಗುಣಮುಖರಾಗಿದ್ದಾರೆ ಎಂದು ತಹಶೀಲ್ದಾರ್ ಐ.ಇ.ಬಸವರಾಜ್ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.