ಮೈಸೂರು: ಕೇಂದ್ರ ಸರ್ಕಾರ ರೂಪಿಸಿರುವ ಮೆಟ್ರೊ ನಿಯೊ ಹಾಗೂ ಮೆಟ್ರೊ ಲೈಟ್ ಯೋಜನೆಯನ್ನು ಮೈಸೂರಿನಲ್ಲಿ ಜಾರಿಗೊಳಿಸುವ ಕುರಿತ ಕಾರ್ಯಸಾಧ್ಯತಾ ಸಮೀಕ್ಷೆ ನಡೆಸುವ ಪ್ರಸ್ತಾವಕ್ಕೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದನೆ ನೀಡಿದೆ.

‘ದಕ್ಷಿಣ ಭಾರತದಲ್ಲೇ ಈ ಯೋಜನೆಗೆ ಸಮೀಕ್ಷೆ ನಡೆಸಲು ಮುಂದಾದ ಪ್ರಥಮ ನಗರಿ ಎಂಬ ಶ್ರೇಯಕ್ಕೆ ಮೈಸೂರು ಪಾತ್ರವಾಗಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ರಾಜೀವ್ ತಿಳಿಸಿದರು.

ಕೇಂದ್ರವು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಟೈಯರ್ 2 ನಗರಗಳಿಗೆಂದು ಈ ಯೋಜನೆಯಡಿ ₹ 18 ಸಾವಿರ ಕೋಟಿ ಮೀಸಲಿರಿಸಿದೆ. ಶೇ 80ರಷ್ಟು ಹಣ ಕೇಂದ್ರದಿಂದ ಶೇ 10ರಷ್ಟು ರಾಜ್ಯ ಸರ್ಕಾರದಿಂದ ಲಭ್ಯವಾಗಲಿದ್ದು, ಶೇ 10ರಷ್ಟು ಹಣ ಮಾತ್ರ ಪ್ರಾಧಿಕಾರದಿಂದ ಭರಿಸಬೇಕಿರುತ್ತದೆ. ಸಮೀಕ್ಷಾ ವರದಿಯ ಸಿದ್ಧವಾದ ಬಳಿಕ ರಾಜ್ಯಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.

ಮೆಟ್ರೊ ನಿಯೊ ಯೋಜನೆಯಲ್ಲಿ 18ರಿಂದ 25 ಮೀಟರ್ ಉದ್ದದ ಬಸ್ಗಳು ಮೆಟ್ರೊ ಟೈಯರ್ ಮೂಲಕ ಸೇತುವೆ ಮೇಲೆ ಸಂಚರಿಸುತ್ತವೆ. ಮೆಟ್ರೊ ಲೈಟ್ ಚಕ್ರದ ಆಧಾರದ ಮೇಲೆ ಸಾಗುವಂತದ್ದಾಗಿದೆ. ಗುಜರಾತ್ನ ಹಲವು ನಗರಗಳಲ್ಲಿ ಹಾಗೂ ನಾಸಿಕ್ನಲ್ಲಿ ಈ ಯೋಜನೆ ಕುರಿತು ಸಮೀಕ್ಷಾ ವರದಿ ಸಿದ್ಧವಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.