ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಮುಗಿಸಿ ನಾಡಿನಿಂದ ಕಾಡಿಗೆ ಗಜಪಡೆ ಹೊರಡುವ ವೇಳೆ ಕಣ್ಣೀರಿಟ್ಟ ‘ಅರ್ಜುನ’

Last Updated 21 ಅಕ್ಟೋಬರ್ 2018, 15:51 IST
ಅಕ್ಷರ ಗಾತ್ರ

ಮೈಸೂರು: ನಾಡಿನಿಂದ ಕಾಡಿಗೆ ಗಜಪಡೆ ಹೊರಡುವ ಸಮಯ ಅರ್ಜುನ ಆನೆ ಕಣ್ಣೀರಿಟ್ಟರೆ, ಧನಂಜಯ ಆನೆ ಲಾರಿ ಹತ್ತಲು ನಿರಾಕರಿಸಿತು.

ದಸರಾ ಮಹೋತ್ಸವ ಅಂಗವಾಗಿ ನಗರದಲ್ಲಿ 45 ದಿನಗಳವರೆಗೆ ಬೀಡುಬಿಟ್ಟಿದ್ದ ಆನೆಗಳು, ಭಾನುವಾರ ತಮ್ಮ ಶಿಬಿರಗಳಿಗೆ ಹೊರಟು ನಿಂತಿದ್ದವು. 12 ಆನೆಗಳ ಪೈಕಿ ಭಾನುವಾರ 9 ಆನೆಗಳನ್ನು ಲಾರಿಗೆ ಹತ್ತಿಸಲಾಗುತ್ತಿತ್ತು. ಹೊರಡುವ ಸಮಯದಲ್ಲಿ ಅರ್ಜುನ ಆನೆಯ ಕಣ್ಣಲ್ಲಿ ನೀರು ಸುರಿಯುತ್ತಿದ್ದುದು ಸ್ಥಳದಲ್ಲಿದ್ದವರ ಮನಕಲಕಿತು.

ಕಾವಾಡಿ ಮಹೇಶ್‌ ಕಣ್ಣೀರೊರೆಸಿ ‘ಅಳಬೇಡ ಅರ್ಜುನ. ನಾವು ನಿನ್ನ ಜತೆ ಇದ್ದೀವಲ್ಲ’ ಎಂದು ಸಮಾಧಾನಪಡಿಸಿದನು. ಈ ದೃಶ್ಯ ನೋಡಿದ ಜನರ ಕಣ್ಣುಗಳು ಒದ್ದೆಯಾದವು.

ನಿರಾಕರಿಸಿದ ಧನಂಜಯ: ಧನಂಜಯ ಆನೆ ಲಾರಿ ಹತ್ತಲು ಆರಂಭದಲ್ಲಿ ನಿರಾಕರಿಸಿತು. 10 ನಿಮಿಷಗಳ ಕಾಲ ಪ್ರಯತ್ನಪಟ್ಟು ಪ್ರಶಾಂತ ಆನೆಯ ಸಹಾಯದಿಂದ ಲಾರಿಗೆ ಹತ್ತಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT