ಶುಕ್ರವಾರ, ಫೆಬ್ರವರಿ 28, 2020
19 °C

ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಗಾನ ಸುಧೆಗೆ ತಲೆದೂಗಿದ ಪ್ರೇಕ್ಷಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್‌ನ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಭಾನುವಾರ ನಡೆದ ‘ಸ್ವರಾನುಭೂತಿ’ ಕಾರ್ಯಕ್ರಮದಲ್ಲಿ ಗಾಯಕ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಕಂಠಸಿರಿಗೆ ಪ್ರೇಕ್ಷಕ ವೃಂದ ತಲೆದೂಗಿತು.

ಇವರಿಗೆ ಗಾಯಕಿ ದಿವ್ಯಾ ರಾಘವನ್ ಹಲವು ಹಾಡುಗಳಿಗೆ ಸಾಥ್ ನೀಡಿದರು. ಹಳೆಯ ಹಾಡುಗಳ ರಸದೌತಣ ಸವಿದ ಸಭಿಕರು ಇಳಿಸಂಜೆಯಲ್ಲಿ ವಿಶೇಷಾನುಭೂತಿ ಪಡೆದರು.

‘ಕನ್ನಡ ನಾಡಿನ ಜೀವ ನದಿ ಕಾವೇರಿ’ ಹಾಡಿಗೆ ಪ್ರೇಕ್ಷಕ ವೃಂದ ತನ್ಮಯಗೊಂಡಿತು. ‘ನನ್ನ ಹಾಡು ನನ್ನದು ನನ್ನ ರಾಗ ನನ್ನದು’ ಹಾಡಿಗೆ ಪ್ರೇಕ್ಷಕರೂ ದನಿಗೂಡಿಸಿದರು. ‘ಈ ಭೂಮಿ ಬಣ್ಣದ ಬುಗುರಿ ಆ ಶಿವನೇ ಚಾಟಿ ಕಣೊ’ ಹಾಡನ್ನು ಪ್ರೇಕ್ಷಕರು ಮೌನವಾಗಿ ಆಲಿಸಿದರು. ಪ್ರತಿ ಹಾಡಿನ ನಂತರ ಭರಪೂರ ಕರತಾಡನಗಳು ಮೊಳಗಿದವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು