ಮೈಸೂರು: ‘ಮೈಸೂರು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ದಿನೇದಿನೇ ಹೆಚ್ಚುತ್ತಿವೆ. ಇಂಥ ಸಮಯದಲ್ಲಿ ಇವರು ದಸರಾ ಮಾಡಲು ಹೊರಟಿದ್ದಾರೆ. ತುಸು ಎಚ್ಚರ ತಪ್ಪಿದರೂ ಜಂಬೂಸವಾರಿ ಹೋಗಿ ಬಂಬೂ ಸವಾರಿ ಆದೀತು’ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಸೋಮವಾರ ಇಲ್ಲಿ ಎಚ್ಚರಿಕೆ ನೀಡಿದರು.

ದಸರಾ ಆಚರಿಸುತ್ತೀರಾ? ಕೋವಿಡ್ ನಿಯಂತ್ರಿಸುತ್ತೀರಾ? ಎಂದರು.

‘ಚಾಮುಂಡಿಬೆಟ್ಟದಲ್ಲಿ ಉದ್ಘಾ ಟನೆ ಮಾಡಿ, ಜಂಬೂಸವಾರಿಗೆ ಸಾಂಕೇತಿ ಕವಾಗಿ ಪುಷ್ಪಾರ್ಚನೆ ಮಾಡಿದರೆ ಸಾಕು. ಬೇರೆ ಯಾವುದೇ ಕಾರ್ಯಕ್ರಮ ಬೇಡ. ಎರಡು ಸಾವಿರ ಜನರ ಸೇರಿಸಲು ನಿರ್ಧರಿಸಿದರೆ ನಾವು ರಾಜಕೀಯ ದವರು, ಅಧಿಕಾ ರಿಗಳು, ಅವರ ಹೆಂಡತಿ, ಇವರ ಹೆಂಡತಿ, ಕುಟುಂಬ ದವರು ಸೇರಿ ಅಂದು 10 ಸಾವಿರ ಆಗುತ್ತಾರೆ. ಅದ ಕ್ಕಾಗಿ ಈಗಲೇ ಆಸ್ಪತ್ರೆ ಸಿದ್ಧಪಡಿಸಬೇಕಾಗುತ್ತದೆ. ಈಗಲೇ ಹಾಸಿಗೆಗಳು ಇಲ್ಲ. ಹೀಗಾಗಿ, ಹುಷಾರ್ ಆಗಿ ಆಚರಿಸಿ’ ಎಂದರು.

‘ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ದಂತೆ ಯಾವುದೇ ಕಾರ್ಯಕ್ರಮ ಬೇಡ. ಈಗ ಕೋತಿ ಕುಣಿದರೂ ಸಾವಿರಾರು ಜನ ಸೇರುತ್ತಾರೆ. ಅಂಥದ್ದರಲ್ಲಿ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಸಿದರೆ ಹೆಚ್ಚು ಜನ ಸೇರುವು ದಿಲ್ಲವೇ? ಕೋವಿಡ್ ಸ್ಫೋಟಗೊಂಡರೆ ಯಾರು ಹೊಣೆ?’ ಎಂದು ಕೇಳಿದರು.

‘ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರಿಗೆ ಗಾಂಭೀರ್ಯವೇ ಅರ್ಥವಾಗುತ್ತಿಲ್ಲ. ಜಿಲ್ಲೆಯ ಹಿರಿಯರೂ ಅದನ್ನು ಅರ್ಥ ಮಾಡಿಸುತ್ತಿಲ್ಲ. ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಜಿ.ಟಿ.ದೇವೇಗೌಡ, ಎಸ್.ಎ.ರಾಮದಾಸ್, ಸಾ.ರಾ.ಮಹೇಶ್ ಸಲಹೆ ನೀಡಬೇಕು’ ಎಂದು ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.