ಮೈಸೂರು: ಗೃಹ ಖಾತೆ ಕೊಟ್ಟರೆ ನನಗೆ ನಿಭಾಯಿಸುವ ಶಕ್ತಿ ಇದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

'25 ವರ್ಷ ಪೊಲೀಸ್ ಕೆಲಸ ಮಾಡಿದ್ದೇನೆ. ನಾನು ಗೃಹ ಖಾತೆ ಬಗ್ಗೆ ಚಿಂತನೆ ಮಾಡಿಲ್ಲ. ಗೃಹ ಖಾತೆ ನೀಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು' ಎಂದು ಇಲ್ಲಿ ಶುಕ್ರವಾರ ಸುದ್ದಿಗಾರರಿಗೆ ಹೇಳಿದರು.

'ಆರಗ ಜ್ಞಾನೇಂದ್ರ ಕೂಡ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಮೊಸರಲ್ಲಿ ಕುಲ್ಲು ಹುಡುಕುವ ಕೆಲಸ ಬೇಡ' ಎಂದರು.

'ರಾಜ್ಯದಲ್ಲಿ ಶಾಂತಿಭಂಗ ಉಂಟಾಗಿಲ್ಲ. ಶಾಂತಿ ಕೆಡಿಸಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ.ಹುಬ್ಬಳ್ಳಿ ಗಲಭೆಯಲ್ಲಿ ಪೋಸ್ಟ್ ಹಾಕಿದವನನ್ನು ಬಂಧಿಸಲಾಗಿದೆ.ಆತನನ್ನ ವಶಕ್ಕೆ ಕೊಡಿ ಅಂತ ಸಾವಿರಾರು ಜನ ಸೇರಿ ಗೂಂಡಾ ವರ್ತನೆ ಮಾಡಿದರೆ ಅದು ಸರಿನಾ. ಅವರು ಆ ಮಟ್ಟಕ್ಕೆ ಹೋದರೆ ಇದು ಭಾರತವೋ ಅಥವಾ ತಾಲಿಬಾನೋ?ಇದಕ್ಕೆ ಉತ್ತರ ಕೊಡಬೇಕು' ಎಂದು ಕಿಡಿಕಾರಿದರು.

'ಕಾನೂನು ಯಾರೂ ಕೈಗೆತ್ತಿಕೊಳ್ಳಲಾಗಲ್ಲ. ಅಂತವರ ರಕ್ಷಣೆಯನ್ನ ಕಾಂಗ್ರೆಸ್ನವರುಮಾಡುತ್ತಾರೆ.ಇವರು ದೇಶದ ಪರವೋ ವಿರೋಧವೊ' ಎಂದು ಪ್ರಶ್ನಿಸಿದರು.

‘ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ 10 ಸಾವಿರ ಕೊಡುತ್ತಿದೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ಏನಾದರು ಮಾಡಿದ್ದಾರಾ ಅವರು ಉತ್ತರ ಕೊಡಲಿ' ಎಂದು ಸವಾಲೆಸೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.