ಭಾನುವಾರ, ಜನವರಿ 24, 2021
17 °C

ಬಿಎಸ್‌ವೈ ಈಗ ಆರಾಮವಾಗಿದ್ದಾರೆ, ಮುಂದೆ ನೋಡಿಕೊಳ್ಳುತ್ತೇವೆ: ಶ್ರೀನಿವಾಸಪ್ರಸಾದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಮುಖ್ಯಮಂತ್ರಿ ಆಗುವವರೆಗೂ ಬಿ.ಎಸ್.ಯಡಿಯೂರಪ್ಪ ಅವರಿಗೆ ನನ್ನ ಅಗತ್ಯ ಇತ್ತು. ಈಗ ಅವರು ಆರಾಮವಾಗಿರುವುದರಿಂದ ನನ್ನೊಂದಿಗೆ ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಿಲ್ಲ. ಮುಂದೆ ಅವರನ್ನು ನೋಡಿಕೊಳ್ಳುತ್ತೇವೆ’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ತಿಳಿಸಿದರು.

ಹಳೆಯ ಮೈಸೂರು ಭಾಗಕ್ಕೆ ಸಚಿವ ಸ್ಥಾನ ಬೇಕು ಎನ್ನುವ ಕೂಗಿದೆ. ಹಾಗೆ ನೋಡಿದರೆ, ಬಹುತೇಕ ಮಂದಿ ಈ ಭಾಗದವರೇ ಸಚಿವರಾಗಿದ್ದಾರೆ. ಇನ್ನೆಷ್ಟು ಮಂದಿಯನ್ನು ಗುಡ್ಡೆ ಹಾಕುತ್ತೀರಿ ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟ ಇರಲಿಲ್ಲ. ಈಗಲೂ ಸಚಿವನಾಗಲು ಬಯಸುವುದಿಲ್ಲ. ಸಚಿವ ಸ್ಥಾನ ನೀಡಬೇಕು ಎನ್ನುವ ಅಳಿಯ ಶಾಸಕ ಹರ್ಷವರ್ಧನ್‌ ಹೇಳಿಕೆ ಕುರಿತು ಏನನ್ನೂ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನನ್ನ ಸಾಧನೆ ಏನು ಎಂದು ಕೇಳುವ ಕಾಂಗ್ರೆಸ್ ಮುಖಂಡ ಧ್ರುವನಾರಾಯಣ ನನ್ನ ಉಗುರಿಗೆ ಸಮಾನ. 2 ಬಾರಿ ಸಂಸದರಾಗಿದ್ದವರು ಬಾಲಿಶ ಹೇಳಿಕೆ ನೀಡಬಾರದು’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು