ಮೈಸೂರು: ನಂಜನಗೂಡಿನಲ್ಲಿ ನಡೆದಿದ್ದ ಮಗು ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ನಂಜನಗೂಡಿನ ಶ್ರೀಮತಿ (63) ಹಾಗೂ ಇವರ ಪುತ್ರಿ ಲಕ್ಷ್ಮಿ ಬಂಧಿತರು.

ಇವರು ನಂಜನಗೂಡಿನ ಜ್ಯೋತಿ ಅವರ ಎರಡು ತಿಂಗಳ ಗಂಡು ಮಗುವನ್ನು ಯಶೋದಮ್ಮ ಅವರಿಗೆ ₹ 4 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ಮಂಜುಳಾ ಅವರ 8 ತಿಂಗಳ ಹೆಣ್ಣು ಮಗುವನ್ನು ಕೊಳ್ಳೇಗಾಲದ ಚೈತ್ರಾ ಎಂಬುವವರಿಗೆ ಮಾರಾಟ ಮಾಡಿದ್ದಾರೆ ಎಂದು ಇಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ್ಯೋತಿ ಹಾಗೂ ಮಂಜುಳಾ ಅವರ ಹೆರಿಗೆಯು ಮೈಸೂರಿನ ಎಸ್ ಎಲ್ ಇ ಎಸ್ ಆಸ್ಪತ್ರೆಯಲ್ಲೇ ನಡೆದಿದ್ದು, ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಬೇಕಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.