ಶುಕ್ರವಾರ, ಅಕ್ಟೋಬರ್ 18, 2019
20 °C

ಗಾಯಕ ಚಂದನ್‌ಶೆಟ್ಟಿ ವಿರುದ್ಧ 4 ದೂರುಗಳು ದಾಖಲು

Published:
Updated:

ಮೈಸೂರು: ಗಾಯಕ ಚಂದನ್‌ಶೆಟ್ಟಿ ಮತ್ತು ಬಿಗ್‌ಬಾಸ್‌ ಸ್ಪರ್ಧಿ ನಿವೇದಿತಾಗೌಡ ವಿರುದ್ಧ ಇಲ್ಲಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಶನಿವಾರ 4 ದೂರುಗಳು ದಾಖಲಾಗಿವೆ.

ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಮೋಸಿನ್‌ಖಾನ್, ಮಾಹಿತಿ ಹಕ್ಕು ಕಾರ್ಯಕರ್ತ ಗಂಗರಾಜು, ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಹಾಗೂ ಕರ್ನಾಟಕ ಪ್ರಜಾ ಪಾರ್ಟಿಯ ಸದಸ್ಯರು ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಇವರು ಸರ್ಕಾರಿ ವೇದಿಕೆ ದುರ್ಬಳಕೆ, ವೇದಿಕೆಗೆ ಅತಿಕ್ರಮ ಪ್ರವೇಶ, ಸಂಚು ರೂಪಿಸಿ ಪ್ರಚಾರ ಪಡೆಯುವುದು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ... ಸರ್ಕಾರಿ ವೇದಿಕೆ ಮೇಲೆ ಪ್ರೇಮ ನಿವೇದನೆ! ಕ್ಷಮೆಯಾಚಿಸಿದ ಚಂದನ್‌ ಶೆಟ್ಟಿ

Post Comments (+)