ಮಂಗಳವಾರ, ಜೂನ್ 2, 2020
27 °C

ಮೈಸೂರು ಔಷಧ ಕಾರ್ಖಾನೆ ನೌಕರರಲ್ಲಿ ವೈರಸ್ ಪತ್ತೆ, ಮೂವರಿಗೆ ಕೋವಿಡ್ -19 ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ನಂಜನಗೂಡಿನ ಔಷಧ ಕಾರ್ಖಾನೆಯ ಮತ್ತಿಬ್ಬರು ನೌಕರರಲ್ಲಿ ಕೋವಿಡ್ -19 ದೃಢಪಟ್ಟಿದೆ.

ಈ ಇಬ್ಬರು ನೌಕರರಲ್ಲಿ ಒಬ್ಬರ ಜತೆಯಿದ್ದ ಬೆಂಗಳೂರಿನ ವ್ಯಕ್ತಿಗೂ ಕೋವಿಡ್ ದೃಢಪಟ್ಟಿದೆ. ಮೂವರನ್ನು ಮೈಸೂರಿನ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ಕೋವಿಡ್-19 ಪೀಡಿತರ ಸಂಖ್ಯೆ 17ಕ್ಕೇರಿದೆ. ಇದರಲ್ಲಿ ಔಷಧ ಕಾರ್ಖಾನೆಯ ನೌಕರರ ಸಂಖ್ಯೆ 14 ಆಗಿದ್ದರೆ, ಇವರ ಸಂಪರ್ಕದಲ್ಲಿದ್ದ ಸಂಬಂಧಿಗೂ ರೋಗ ತಗುಲಿದೆ. ಇನ್ನುಳಿದ ಇಬ್ಬರು ದುಬೈನಿಂದ ಮರಳಿದವರಾಗಿದ್ದಾರೆ.

ಜಿಲ್ಲೆಯಲ್ಲಿ ಮಂಗಳವಾರ ಮತ್ತೆ ಮೂವರು ಕೋವಿಡ್-19 ಕಾಯಿಲೆಗೆ ಒಳಗಾಗಿದ್ದಾರೆ. 37, 27 ಮತ್ತು 33 ವರ್ಷದ ಇವರನ್ನು ಹೊಸ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಇವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ‌.ಶಂಕರ್ ತಿಳಿಸಿದ್ದಾರೆ. ಇವರು ನಂಜನಗೂಡಿನ ಔಷಧ ತಯಾರಿಕಾ ಕಾರ್ಖಾ‌ನೆಯ ಕೋವಿಡ್ ಪೀಡಿತ ರೋಗಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದವರು‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು