ಶನಿವಾರ, ಜೂಲೈ 4, 2020
22 °C

ಮೈಸೂರು: ಮಾಸ್ಕ್ ಧರಿಸದೇ ಓಡಾಟ, ಪಾಲಿಕೆಯಿಂದ ₹16,700 ದಂಡ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Mysore fine for not wearing mask

ಮೈಸೂರು: ನಗರದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಪಾಲಿಕೆ ಅಧಿಕಾರಿಗಳ ತಂಡವು ಶುಕ್ರವಾರ ಮಧ್ಯಾಹ್ನದವರೆಗೆ ₹ 16,700 ದಂಡ ಸಂಗ್ರಹಿಸಿದೆ.

ಪಾಲಿಕೆಯ ವಲಯ 1- ₹ 300, ವಲಯ 2- ₹ 4,600, ವಲಯ- 3 ₹ 400, ವಲಯ - 4 ₹ 5,500, ವಲಯ 6 ₹800 , ವಲಯ 7-  ₹2,600, ವಲಯ -8 ₹1,000, ವಲಯ 9 ₹500 ದಂಡ ಸಂಗ್ರಹ ಮಾಡಲಾಗಿದೆ.

ಪಾಲಿಕೆಯ 18 ಮಂದಿ ಅಧಿಕಾರಿಗಳು, ಪೊಲೀಸ್‌ ಇಲಾಖೆಯಿಂದ 18 ಮಂದಿ, ಪಾಲಿಕೆಯ 30 ಮಂದಿ ಆರೋಗ್ಯ ನಿರೀಕ್ಷಕರು, 18 ಮಂದಿ ಪರಿಸರ ಎಂಜಿನಿಯರ್‌ ತಂಡದಲ್ಲಿದ್ದು, ಮಾಸ್ಕ್ ಧರಿಸದೇ ಇರುವವರಿಗೆ  ದಂಡ ವಸೂಲಿ ಮಾಡಿ ರಶೀದಿ ಕೊಡಲಾಗುತ್ತಿದೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು