ಶುಕ್ರವಾರ, ಜುಲೈ 30, 2021
28 °C

ದರ್ಶನ್ ಬೈಯ್ದಿದ್ದು ನಿಜ, ಹಲ್ಲೆ ನಡೆಸಿಲ್ಲ: ಸಂದೇಶ್ ನಾಗರಾಜ್ ಪುತ್ರ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಲಾಕ್‌ಡೌನ್‌ಗೆ 4 ದಿನಗಳ ಮುಂಚೆ ನಟ ದರ್ಶನ್ ಅವರು ನಮ್ಮ ಹೋಟೆಲ್ಲಿನ ಕಾರ್ಮಿಕರೊಬ್ಬರಿಗೆ ಬೈಯ್ದಿದ್ದು ನಿಜ. ಆದರೆ, ಅವರು ಹಲ್ಲೆ ನಡೆಸಿಲ್ಲ’ ಎಂದು ‘ಸಂದೇಶ್‌ ದ ಪ್ರಿನ್ಸ್‌’ ಹೋಟೆಲ್‌ ಮಾಲೀಕ ಸಂದೇಶ್‌ ನಾಗರಾಜ್ ಅವರ ಪುತ್ರ ಸಂದೇಶ್‌ ತಿಳಿಸಿದರು.

‘ರಾತ್ರಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ ದರ್ಶನ್ ಬೈಯ್ಯುತ್ತಾರೆ. ಮಹಾರಾಷ್ಟ್ರ ಮೂಲದ ಕಾರ್ಮಿಕರೊಬ್ಬರಿಗೆ ಕನ್ನಡ ಬರುತ್ತಿರಲಿಲ್ಲ. ಬಹುಶಃ ಇದು ಗೊಂದಲಕ್ಕೆ ಎಡೆ ಮಾಡಿರಬಹುದು. ಆದರೆ, ಹಲ್ಲೆ ನಡೆದಿಲ್ಲ. ಒಂದು ವೇಳೆ ಹಲ್ಲೆ ನಡೆದಿದ್ದರೆ ನಾನೇ ಪೊಲೀಸರಿಗೆ ದೂರು ನೀಡುತ್ತಿದ್ದೆ. ಬಳಿಕ ಕಾರ್ಮಿಕನ ಬಳಿ ಕ್ಷಮೆ ಕೇಳಿದ್ದೇನೆ’ ಎಂದು ಹೇಳಿದರು.

‘ನಮ್ಮ ಹೋಟೆಲ್‌ನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳು 10 ದಿನಗಳ ನಂತರ ತಾನೇ ತಾನಾಗಿ ಡಿಲಿಟ್‌ ಆಗುತ್ತವೆ. ಘಟನೆ ಕುರಿತು ಇಂದ್ರಜಿತ್ ಲಂಕೇಶ್‌ 15 ದಿನಗಳ ಹಿಂದೆ ನನ್ನನ್ನು ಪ್ರಶ್ನಿಸಿದ್ದರು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು