ಮೈಸೂರು: ‘ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ ನಮ್ಮವ ರನ್ನು ಎನ್‌ಕೌಂಟರ್ ಮಾಡಬೇಡಿ’ ಎಂದು ಆರೋಪಿಗಳ ಪೋಷಕರು ಪೊಲೀಸರಲ್ಲಿ ಮನವಿ
ಮಾಡಿದ್ದಾರೆ.
ಕೃತ್ಯ ನಡೆಸಿದ ದಿನ ತೊಟ್ಟಿದ್ದ ಬಟ್ಟೆ ಹಾಗೂ ಹಲ್ಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲು ಪೊಲೀಸರು ತಮಿಳುನಾಡಿನಲ್ಲಿರುವ ಆರೋಪಿಗಳ ಮನೆಗಳಿಗೆ ತೆರಳಿದಾಗ ಪೋಷಕರು ಕಣ್ಣೀರಿಡುತ್ತಾ ಕೈ ಮುಗಿದಿದ್ದಾರೆ.
‘ಕರ್ನಾಟಕ ಪೊಲೀಸರು ಆರೋಪಿಗಳನ್ನು ಎನ್‌ಕೌಂಟರ್ ಮಾಡುತ್ತಾರೆ’ ಎಂಬ ಸುದ್ದಿ ಸತ್ಯಮಂಗಲ, ಈರೋಡ್, ತಾಳವಾಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಹಬ್ಬಿದೆ.
ಸ್ಥಳೀಯ ಮಾಧ್ಯಮಗಳೂ ಆರೋಪಿಗಳನ್ನು ಎನ್‌ಕೌಂಟರ್ ಮಾಡುವಂತೆ ಕರ್ನಾಟಕದ ರಾಜಕಾರಣಿಗಳು ನೀಡಿದ ಹೇಳಿಕೆಯನ್ನು ಪ್ರಧಾನವಾಗಿ ಬಿತ್ತರಿಸಿ, ಎನ್‌ಕೌಂಟರ್ ಮಾಡುವ ಸಾಧ್ಯತೆ ಕುರಿತು ಹೆಚ್ಚು ಚರ್ಚೆ ನಡೆಸಿವೆ. ಹೀಗಾಗಿ ಪೊಲೀಸರು ಎನ್‌ಕೌಂಟರ್ ಮಾಡಿಬಿಡಬಹುದು ಎಂಬ ಭೀತಿ ಪೋಷಕರಲ್ಲಿದೆ.
ಇವುಗಳನ್ನೂ ಓದಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.