ಮಂಗಳವಾರ, ಡಿಸೆಂಬರ್ 7, 2021
23 °C

ಮೈಸೂರು: ತಂದೆ ಮತ್ತು ಅವರ ಸ್ನೇಹಿತೆಯನ್ನು ಕೊಲೆ ಮಾಡಿ ಪರಾರಿಯಾದ ಪುತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಶ್ರೀನಗರದ ನಿವಾಸಿ ಲತಾ (48) ಹಾಗೂ ಕೆ.ಜಿ.ಕೊಪ್ಪಲು ನಿವಾಸಿ ಶಿವಪ್ರಕಾಶ್ (56) ಎಂಬುವವರನ್ನು ಶಿವಪ್ರಕಾಶ್ ಅವರ ಪುತ್ರ ಸಾಗರ್ ಗುರುವಾರ ರಾತ್ರಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಲತಾ ಅವರ ಮನೆಯಲ್ಲಿದ್ದ ಶಿವಪ್ರಕಾಶ ಮೇಲೆ ಮೊದಲು ಪುತ್ರ ಮಚ್ಚಿನಿಂದ ಹೊಡೆದು ಕೊಲೆ ಮಾಡಿದ. ತಡೆಯಲು ಬಂದ ಲತಾ ಅವರ ಮೇಲು ಮಚ್ಚಿ ಬೀಸಿದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಹಿಡಿಯಲು ಬಂದ ಲತಾ ಪುತ್ರ ನಾಗಾರ್ಜುನ ಅವರಿಗೂ ಗಾಯಗಳಾಗಿವೆ.

ಶಿವಪ್ರಕಾಶ್ ಹಾಗೂ ಲತಾ ಮಧ್ಯೆ ಇದ್ದ ಸ್ನೇಹವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ . ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು