ಸೋಮವಾರ, ಜನವರಿ 20, 2020
20 °C

ಪವರ್‌ಗ್ರಿಡ್ ವಿರುದ್ಧ ಮತ್ತೆ ರೈತರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ತಾಲ್ಲೂಕಿನ ಇಲವಾಲ ಹೋಬಳಿಯಲ್ಲಿ ತಮ್ಮ ಜಮೀನಿನ ಮೇಲೆ ಪವರ್‌ ಗ್ರಿಡ್‌ ವಿದ್ಯುತ್ ಲೈನ್ ಹಾಕಲು ಭಾನುವಾರ ಬಂದಿದ್ದ ಸಿಬ್ಬಂದಿ ಮತ್ತು ಪೊಲೀಸರಿಗೆ ರೈತರು ಪ್ರತಿರೋಧ ವ್ಯಕ್ತಪಡಿಸಿದರು.

ಇದರಿಂದ ಫಲವತ್ತಾದ ರೈತರ ಜಮೀನು, ತೋಟಗಳು ಹಾಳಾಗುತ್ತವೆ. ಈ ಲೈನ್‌ಗೆ ಪರ್ಯಾಯ ಮಾರ್ಗವನ್ನು ಹುಡುಕಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೂ ಮುನ್ನ ಜೂನ್ ತಿಂಗಳಿನಲ್ಲಿ ಮೈದುನಹಳ್ಳಿಯಲ್ಲಿರುವ ಪವರ್‌ ಗ್ರಿಡ್ ಕಾರ್ಪೊರೇಷನ್‌ ಆಫ್ ಇಂಡಿಯಾ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದ್ದರು. ರಿಯಲ್‌ ಎಸ್ಟೇಟ್ ಲಾಬಿಯಿಂದಾಗಿ ರೈತರ ಜಮೀನಿನ ಮೇಲೆ ಲೈನ್ ಎಳೆಯಲಾಗುತ್ತಿದೆ. ಇದನ್ನು ಬಿಟ್ಟು ನಿವೇಶನಗಳಾಗಿರುವ ಕಡೆ ಅತ್ಯಂತ ಕಡಿಮೆ ದೂರದಲ್ಲಿ ಲೈನ್ ಎಳೆಯಬಹುದು ಎಂದು ರೈತರು ಹೇಳಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು