ಶನಿವಾರ, ನವೆಂಬರ್ 23, 2019
18 °C

ಮೊದಲು ರಾಷ್ಟ್ರಧ್ವಜ ನಂತರ ಕನ್ನಡ ಧ್ವಜ: ಸಚಿವ ಸೋಮಣ್ಣ

Published:
Updated:

ಮೈಸೂರು: ‘ಕನ್ನಡ ರಾಜ್ಯೋತ್ಸವವೇ ಆಗಲಿ ಅಥವಾ ಬೇರೆ ಇನ್ನಾವ ಆಚರಣೆಯೇ ಆಗಲಿ ಅಲ್ಲಿ ಮೊದಲು ರಾಷ್ಟ್ರಧ್ವಜ ಹಾರಿಸಬೇಕು. ನಂತರವಷ್ಟೇ ಕನ್ನಡ ಧ್ವಜ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ’ ಎಂದು ಸಚಿವ ವಿ.ಸೋಮಣ್ಣ ಶುಕ್ರವಾರ ಇಲ್ಲಿ ಹೇಳಿದರು.

‘ನಾವು ಏನೇ ಮಾಡಿದರೂ ರಾಷ್ಟ್ರದ ಏಕತೆಗೆ ಧಕ್ಕೆ ಬಾರದ ಹಾಗೆ ನೋಡಿಕೊಳ್ಳಬೇಕು. ಕರ್ನಾಟಕವು ಭಾರತದ ಅವಿಭಾಜ್ಯ ಅಂಗ ಎಂಬುದು ನಮ್ಮ ಗಮನದಲ್ಲಿರಬೇಕು. ಮೊದಲು ರಾಷ್ಟ್ರಧ್ವಜ ಹಾರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಈ ಬಗ್ಗೆ ಗೊಂದಲ ಅನಗತ್ಯ’ ಎಂದರು.

ಪ್ರತಿಕ್ರಿಯಿಸಿ (+)