ಶುಕ್ರವಾರ, ನವೆಂಬರ್ 27, 2020
24 °C

ಮೈಸೂರು ತಾಲ್ಲೂಕು ಟಿಎಪಿಎಂಸಿಎಸ್ ಚುನಾವಣೆ: ಜಿಟಿಡಿ ಬೆಂಬಲಿತ 13 ಸದಸ್ಯರ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್‌) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಗೆ ಶಾಸಕ ಜಿ.ಟಿ.ದೇವೇಗೌಡರ ಬೆಂಬಲಿತ13 ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ನ.7ರಂದು ನಿಗದಿಯಾಗಿದ್ದ ಚುನಾವಣೆಗೆ ‘ಎ’ ವರ್ಗ ದಿಂದ ಐದು ಮಂದಿ, ‘ಬಿ’ ವರ್ಗದಿಂದ ಎಂಟು ಮಂದಿ ಆಯ್ಕೆ ಆಗಬೇಕಿತ್ತು. ಅದಕ್ಕೆ ಕ್ರಮವಾಗಿ 8 ಹಾಗೂ 21 ನಾಮಪತ್ರ ಸಲ್ಲಿಕೆಯಾಗಿದ್ದವು. ‘ಎ’ ವರ್ಗದಲ್ಲಿ ಶನಿವಾರ ನಾಮಪತ್ರ ಪರಿಶೀಲನೆ ವೇಳೆ ಮೂರು ಅರ್ಜಿಗಳು ತಿರಸ್ಕತವಾಗಿದ್ದವು. ಹೀಗಾಗಿ, ಐವರು ಅವಿರೋಧ ಆಯ್ಕೆ ಯಾದರು. ‘ಬಿ’ ವರ್ಗದ 13 ಮಂದಿ ನಾಮಪತ್ರ ವಾಪಸ್ಸು ಪಡೆದಿದ್ದರಿಂದ ಎಂಟು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಐದು ವರ್ಷಗಳ ಅಧಿಕಾರಾವಧಿ ಇದಾಗಿದೆ.

‘ಎ’ ವರ್ಗದಿಂದ ದಾಸನಕೊಪ್ಪಲು ಹೊನ್ನಗಿರಿಗೌಡ, ಕಾಮನಕೆರೆಹುಂಡಿ ಎಚ್.ಗೋಪಾಲ್‌, ಹಾರೋಹಳ್ಳಿ ಎಂ.ಬಿ.ಮಂಜುನಾಥ್‌, ಚಿಕ್ಕಹಳ್ಳಿ ಎಂ.ಕುಮಾರ್‌, ಯರಗನಹಳ್ಳಿ ಅಣ್ಣಯ್ಯ, ‘ಬಿ’ ವರ್ಗದಿಂದ ಬೋಗಾದಿಯ ಚಂದ್ರಶೇಖರ್‌, ಕಾಮನಕೆರೆಹುಂಡಿ ಪ್ರಕಾಶ್, ಕುಂಬಾರಕೊಪ್ಪಲು ಲಲಿತಮ್ಮ, ಬೋಗಾದಿ ರುಕ್ಮಿಣಿ, ಜಟ್ಟಿಹುಂಡಿ ಯೋಗೇಶ್‌, ಮಾವಿನಹಳ್ಳಿ ರಾಮಕೃಷ್ಣಚಾರಿ, ಗೋಪಾಲಪುರ ಅಂದಾನಿ ಜಯಪುರ ರೇಣುಕ  ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.