ಸೋಮವಾರ, ಮಾರ್ಚ್ 1, 2021
24 °C

ಹಾಫ್ ಮ್ಯಾರಾಥಾನ್: ನೋಂದಣಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ದಸರಾ ಹಾಫ್ ಮ್ಯಾರಾಥಾನ್ ಸ್ಪರ್ಧೆ ಅ.6 ರಂದು ಬೆಳಿಗ್ಗೆ 6.30 ರಿಂದ ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ನಡೆಯಲಿದೆ. ಹಾಫ್‌ ಮ್ಯಾರಥಾನ್‌ (21.1 ಕಿ.ಮೀ ದೂರ) ಅಲ್ಲದೆ ಕಾಲೇಜು ವಿದ್ಯಾರ್ಥಿಗಳಿಗೆ 10 ಕಿ.ಮೀ ಓಟ ಮತ್ತು ಶಾಲಾ ಮಕ್ಕಳಿಗೆ 5 ಕಿ.ಮೀ. ಓಟದ ಸ್ಪರ್ಧೆಯೂ ಇರಲಿದೆ.

ಪುರುಷರು ಮತ್ತು ಮಹಿಳೆಯರ ವಿಭಾಗದ ಹಾಫ್‌ ಮ್ಯಾರಥಾನ್‌ನಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆಯುವವರು ಕ್ರಮವಾಗಿ ₹ 40 ಸಾವಿರ, ₹ 30 ಸಾವಿರ, ₹ 20 ಸಾವಿರ, ₹ 15 ಸಾವಿರ ಹಾಗೂ ₹ 10 ಸಾವಿರ ನಗದು ಬಹುಮಾನ ಪಡೆಯಲಿದ್ದಾರೆ.

ಓಟದಲ್ಲಿ ಪಾಲ್ಗೊಳ್ಳಲು ಬಯಸುವ ಸ್ಪರ್ಧಿಗಳು ಅ.5ರ ಮಧ್ಯಾಹ್ನ 1 ಗಂಟೆಯ ಒಳಗಾಗಿ ಹೆಸರು ನೋಂದಾಯಿಸಬಹುದು. ಚಾಮುಂಡಿ ವಿಹಾರ ಕ್ರೀಡಾಂಗಣ, ಲಯನ್ಸ್ ಹಾಲ್ (ಓವೆಲ್ ಮೈದಾನದ ಹತ್ತಿರ), ಮೈಸೂರು ವಿಶ್ವವಿದ್ಯಾನಿಲಯ, ಡೆಕಾಥ್ಲಾನ್ ಮತ್ತು ನಂಜರಾಜ ಬಹದ್ದೂರು ಛತ್ರ ಇಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ.

ಮಾಹಿತಿಗೆ ದೂ: 0821-2564179 ಅಥವಾ ಮೊ: 9448306311 (ಪ್ರಕಾಶ್) ಸಂಪರ್ಕಿಸಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.