ಶುಕ್ರವಾರ, ಜೂನ್ 5, 2020
27 °C

ಕೊರೊನಾ ಸೋಂಕಿತ ವ್ಯಕ್ತಿ ಭೇಟಿ: ಹೆಳವರಹುಂಡಿ ಸೀಲ್‌ಡೌನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಮಂಡ್ಯ ಜಿಲ್ಲೆಯ ಕೊರೊನಾ ಸೋಂಕಿತ ವ್ಯಕ್ತಿಯು ಭೇಟಿ ನೀಡಿದ ನಂಜನಗೂಡು ತಾಲ್ಲೂಕಿನ ಹೆಳವರಹುಂಡಿ ಗ್ರಾಮವನ್ನು ಶುಕ್ರವಾರ ‘ಸೀಲ್‌ಡೌನ್‌’ ಮಾಡಲಾಗಿದೆ.

ಇಲ್ಲಿ 19 ಮಂದಿ ಮತ್ತು ಪಕ್ಕದ ಅಂಜನಾಪುರದಲ್ಲಿ 6 ಮಂದಿ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದರು. ಎಲ್ಲ 25 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ‌ಗ್ರಾಮದಲ್ಲಿರುವ 395 ಕುಟುಂಬಗಳ ಎಲ್ಲ ಸದಸ್ಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

ಅಂಜನಾಪುರದಲ್ಲಿ ವ್ಯಕ್ತಿಯು ಭೇಟಿ ನೀಡಿದ ಮನೆಯು ಊರಿನಿಂದ ಹೊರಗೆ ಇರುವುದರಿಂದ ಆ ಮನೆಯೊಂದನ್ನು ಮಾತ್ರ ಕ್ವಾರಂಟೈನ್ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು