ಭಾನುವಾರ, ಜನವರಿ 24, 2021
28 °C

‘ಫೇಸ್‌ಬುಕ್‌’ ಸ್ನೇಹಿತನೊಂದಿಗೆ ಗೃಹಿಣಿ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಜಿಲ್ಲೆಯ ತಾಲ್ಲೂಕಿನೊಂದರ 28 ವರ್ಷದ ಗೃಹಿಣಿಯೊಬ್ಬರು ತನಗೆ ‘ಫೇಸ್‌ಬುಕ್‌’ನಲ್ಲಿ ಪರಿಚಯನಾದ ವ್ಯಕ್ತಿಯೊಬ್ಬರ ಜತೆ ಪರಾರಿಯಾಗಿದ್ದು, ಬಸವನ ಬಾಗೇವಾಡಿಯಲ್ಲಿ ಪತ್ತೆಯಾಗಿದ್ದಾರೆ.

5 ವರ್ಷದ ಹಿಂದೆ ಸಂಬಂಧಿಕರೊಬ್ಬರನ್ನು ವಿವಾಹವಾಗಿದ್ದ ಮಹಿಳೆಗೆ ಮಕ್ಕಳಿರಲಿಲ್ಲ. ‘ಫೇಸ್‌ಬುಕ್‌’ನಲ್ಲಿ ಪರಿಚಯನಾದ ವ್ಯಕ್ತಿಯೊಂದಿಗೆ ಒಂದು ವಾರದ ಹಿಂದೆ ಇವರು ಬಸವನಬಾಗೇವಾಡಿಗೆ ತೆರಳಿದ್ದಾರೆ. ಈ ವಿಚಾರ ಗೊತ್ತಿರದ ಪತಿ ಪೊಲೀಸರಿಗೆ ದೂರು ನೀಡಿದ್ದರು.

ಪೊಲೀಸರು ಮಹಿಳೆ ಮತ್ತು ಆಕೆಯ ಫೇಸ್‌ಬುಕ್‌ ಸ್ನೇಹಿತನನ್ನು ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಸದ್ಯ, ಮಹಿಳೆಯನ್ನು ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.